ಶುಭಲಕ್ಷ್ಮಿಆರ್ ನಾಯಕ ಅವರ ಕವಿತೆ-ʼಸೇಫ್ಟೀ ಪಿನ್ನುʼ

ಸುರಕ್ಷತೆಗಾಗಿ ಬಳಸುವ ಪಿನ್ನುಇದು
ಆಂಗ್ಲರ ಭಾಷೆಯಲಿ ಸೇಫ್ಟಿ ಪಿನ್ನು
ಸೀರೆಯ ಸೆರಗಿಗೆ ಹಾಕಲು ಬೇಕು
ಹರಿದ ವಸ್ತ್ರದ ಜೋಡಣೆಗೂ ಸೈ//

ಚುಚ್ಚಿದ ಮುಳ್ಳನು ತೆಗೆದು ಹಾಕಲು
ಅಕಸ್ಮತ್ತಾಗಿ ತುಂಡಾದ ಸರ ಚಪ್ಪಲಿಗೂ
ಬಸ್ಸಿನಲ್ಲಿ ಕೀಟಲೆ ಮಾಡಿದವರ ಚುಚ್ಚಲು
ಇದುವೇ ಆಗಿದೆ ಆಪತ್ಬಾಂಧವ//

ನಮ್ಮಜ್ಜಿ ನಮ್ಮಮ್ಮ ಚಿಕ್ಕಮ್ಮ ಅತ್ತೆ
ಎಲ್ಲರಿಗೂ ಇದುವೆ ಪ್ರೀತಿ ಪಾತ್ರ
ಹೆಂಗಳೆಯರ ಮಾನ ಮುಚ್ಚಲು
ಸಹಾಯಕವಿದು ಇದ್ದರೂ ಚಿಕ್ಕಗಾತ್ರ//

ಫಳ ಫಳ ಹೊಳೆಯುವ ಇದರ ಚಂದ
ಎಲ್ಲರ ಮನೆಯಲಿಸರ್ವಾಂತರ್ಯಾಮಿ
ಸ್ಟೀಲು ಬೆಳ್ಳಿ ಬಂಗಾರದಲ್ಲೂ ತಯಾರಿ
ಗೊಂಚಲಲಿ ಮಾರಾಟವಾಗುವ ವಯ್ಯಾರಿ//

ಚಿಕ್ಕದು ಎಂದು ಕಡೆಗಣಿಸುವಂತಿಲ್ಲ
ಇದರ ಉಪಕಾರ ಅರಿಯದವರಿಲ್ಲ
ಸೇಫ್ಟಿಯ ಪಿನ್ನಾಗಿ ಕೆಟ್ಟವರ ಚುಚ್ಚುವ
ಒಳಿತ ಮಾಡುವವರಿಗೆ ಸಹಕಾರ ನೀಡುವ//

ಕಡೆಗಣನೆ ಬೇಡ ಚುಚ್ಚುವ ಪಿನ್ ಎಂದು
ಅಲಂಕಾರ ರಕ್ಷಣೆ ಆಪತ್ತಿಗಾಗುವ ಬಂಧು
ತುಸು ಯೋಚಿಸಿ ಇದರ ಮಹತ್ವವ
ಬಿಡಿ ಕೇವಲ ಚಿಕ್ಕದೆಂಬ ಭಾವವ//


Leave a Reply

Back To Top