ಜಹಾನ್ ಆರಾ ಕೋಳೂರು ಅವರ ಮಕ್ಕಳ ಕವಿತೆ-ನಾವು ಭಾರತೀಯರು

ನಾವು ಭಾರತೀಯರು
ಬೇಕು ನಮಗೆ ಎಲ್ಲ ಧರ್ಮಗಳು
ಶಾಂತಿಗಾಗಿ ಭಾವೈಕ್ಯತೆಗಾಗಿ
 ಸಮನ್ವಯಕ್ಕಾಗಿ ಸಹಬಾಳ್ವೆಗಾಗಿ
ನಾವೆಲ್ಲರು ಒಂದಾಗಿರಲು
ಬೇಕು ನಮಗೆ ಎಲ್ಲ ಧರ್ಮಗಳು

ಧರ್ಮ ಧರ್ಮಗಳಲ್ಲಿ ಬೆಸುಗೆ ತರಲು
ಭಾಷೆ ಭಾಷೆಗಳಲ್ಲಿ ದೇಶದ ಐಕ್ಯತೆ ತರಲು
ವಿಶ್ವ ಶಾಂತಿಯಿಂದ ನಾವೆಲ್ಲರು
ವಿಶ್ವ ಮಾನವರಾಗಿ ಒಂದಾಗಿ
ವಿಶ್ವವ ಬಂಧುಗಳಾಗಿ ಮುಂದಾಗಿ
ಬೇಕು ನಮಗೆ ಎಲ್ಲ ಧರ್ಮಗಳು
ನಾವು ಭಾರತೀಯರು

ಮೇಲು ಕೀಳು ಬಡವ ಧನವಂತನು
ಸಮಾನ ಸ್ನೇಹ ಸೌಹಾರ್ದ ತರಲು
ಎಲ್ಲರಲ್ಲಿ ವಿಶ್ವಾಸದಿ ಬೆರೆತು ಬಾಳಲು
 ಸೋದರತ್ವ ಋಣ  ವಿಶೇಷವಿರಲು
 ಭಾರತದ ಸಂಸ್ಕೃತಿಯ ಪರಿಚಯಿಸಿ
ನಾವೆಲ್ಲರು ಒಂದಾಗಿರಲು
 ಬೇಕು ನಮಗೆ ಎಲ್ಲ ಧರ್ಮಗಳು

————-

Leave a Reply

Back To Top