ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ

ನೋಡ ನೋಡುತ್ತಲೇ ಮುಪ್ಪಡರಿತೇ ಸಖೀ…
ಕೂದಲು ಹಣ್ಣಾಗಿ ತೊಗಲು ಹುಣ್ಣಾಯಿತೇ ಸಖೀ…..

ಹರೆಯದಲಿ ಹಾರಾಡಿದ ದಿನಗಳ ಮರೆಯೋದಾದರೂ ಹೇಗೆ
ಯೌವ್ವನದ ಮಿಂಚುಗಳೆಲ್ಲ ಮಾಯವಾಯಿತೇ ಸಖೀ….

ಹಳೆಯ ಪಟಗಳ ನೋಡಿ ಆಗದಿರದೆ ಮೋಡಿ ನೆನೆದರೆ ರಾಡಿ
ಸವೆದದ್ದು ಸಮಯವೇ …ಕಾಯವೂ ಸವಕಲಾಯಿತೇ ಸಖೀ…

ಕನವರಿಕೆಯಲ್ಲಿ ಕಳೆದ ರಾತ್ರಿಗಳು ಕೆಂಡವಾದವು
ಕಣ್ರೆಪ್ಪೆಯಲಿ ಬಚ್ಚಿಟ್ಟ ಕನಸುಗಳು ನನಸಾಗದೆ ಹೋಯಿತೇ ಸಖೀ..

ಕಾಲದ ಲಯದಲಿ ಕಾಲವಾದವರೆಷ್ಟೋ
ಸಿಕ್ಕಿದ್ದೇ ಸಕಾಲವೆಂದರಿತು ಶೋಭಿಸುವುದ ಕಲಿತರಾಯಿತೇ ಸಖೀ


3 thoughts on “ಶೋಭಾ ಮಲ್ಲಿಕಾರ್ಜುನ್‌ ಅವರ ಕವಿತೆ

Leave a Reply

Back To Top