ಕಾವ್ಯ ಸಂಗಾತಿ
ನರಸಿಂಗರಾವ ಹೇಮನೂರ
ಒಂದು ಮೊಗ್ಗೆಯ ಮೊರೆ

ಕೀಳದಿರಿ ನಮ್ಮನ್ನು
ನಾವು ಅರಳುವ ಮೊದಲೆ
ಕೊನೆಗೊಳಿಸದಿರಿ ಬದುಕ
ಸಾವು ಕರೆಯುವ ಮೊದಲೆ
ಬದುಕಗೊಡಿ, ಅರಳಗೊಡಿ,
ಕೆಲಹೊತ್ತು ನಗಲು ಬಿಡಿ,
ತಾಯ ಮಡಿಲಲಿ ಕೊಂಚ
ಇನ್ನಷ್ಟು ಇರಲು ಬಿಡಿ
ಇರುವೆವೆಲ್ಲ ಕೊನೆಗೆ
ಸೇವೆಗೆಂದೇ ನಿಮಗೆ
ನಿಮ್ಮ ಶೃಂಗಾರಕ್ಕೋ
ದೇವ ಮಂದಿರಕೊ
ಅದಕೆಂದೆ ಬೇಡುವೆವು
ಬೇಡಿಷ್ಟು ಅವಸರವು
ನೋಡಿ ಸಂತಸಪಟ್ಟು
ನಮ್ಮನರಳಲು ಬಿಟ್ಟು
ಉಪಕರಿಸಿ, ಸಹಕರಿಸಿ,
ನಮ್ಮ ಮೊರೆ ಆಲೈಸಿ
ಬದುಕಗೊಡಿ ನಗಲು ಬಿಡಿ
ಕ್ಷಣಹೊತ್ತು ತಾಳ್ಮೆ ಇಡಿ.
ನರಸಿಂಗರಾವ ಹೇಮನೂರ

ಧನ್ಯವಾದಗಳು ಸರ್
ಸುಂದರ ಅರ್ಥಪೂರ್ಣ ಕವನ ಸರ್