ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿ ವರ್ಷವೂ ನಾವು ಏಪ್ರಿಲ್ 2ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತೇವೆ. ಪುಸ್ತಕಗಳು ಜ್ಞಾನದ ಹೆಗ್ಗುರುತು ಕೂಡಾ ಹೌದು. ದೇಶ  ಸುತ್ತು, ಕೋಶ ಓದು ಎಂಬ ಗಾದೆ. ಮಾತಿನಂತೆ ಪುಸ್ತಕಗಳು ನಮ್ಮ ವ್ಯಕ್ತಿತ್ವ ರೂಪುಗೊಳ್ಳಲು ಸಹಾಯ ಮಾಡುತ್ತವೆ. ನಮ್ಮ ಪವಿತ್ರ  ಗ್ರಂಥಗಳಿಂದ ಹಿಡಿದು ದಾರಿ ಬದಿಯ ಪುಸ್ತಕಗಳೆಲ್ಲ ನಮ್ಮ ಜೀವನದ ಅವಿಭಾಜ್ಯ ಅಂಗಗಳೇ. ನಾವು ಚಿಕ್ಕವರಿದ್ದಾಗ ಅಂಗಡಿಗಳಲ್ಲಿ ಸಾಮಾನುಗಳನ್ನು ರದ್ದಿ ಪೇಪರ್ನಲ್ಲಿ ಕಟ್ಟಿ ಕೊಡುತ್ತಿದ್ದರು. ಆದರೆ ಓದುವ ಹುಚ್ಚಿನಿಂದ  ಸಾಮಾನುಗಳು ಕೆಳಗೆ ಚೆಲ್ಲುವ ಪರಿವೆ ಇಲ್ಲದೆ ಓದುತ್ತಾ ಮನೆಗೆ ಬಂದಾಗ  ನಾನು ಮತ್ತು ನನ್ನ ಅಣ್ಣ ಮನೇಲಿ ಬೈಸಿ ಕೊಳ್ಳುತ್ತಿದ್ದೆವು.
ಟೀವಿ.ಮೊಬೈಲ್.ಇಂಟರ್ನೆಟ್ ಗಳಿಲ್ಲದ ಕಾಲದಲ್ಲಿ ನಮಗೆ ಮುಖ್ಯ ಮನರಂಜನೆ ಪುಸ್ತಕಗಳನ್ನು ಓದುವ ರಿಂದ ಸಿಗುತ್ತಿತ್ತು. ಬಸ್ಸಿನಲ್ಲಿ ಕಿಟಕಿ ಬಳಿ ಸೀಟು ಹಿಡಿದು ಪುಸ್ತಕ ಓದಲಿಕ್ಕೆ ಕುಳಿತರೆ, ಆ  longdrive ಮಜಾನೆ ಬೇರೆ ಇತ್ತು. ಸುಧಾ,ಕರ್ಮವೀರ, ತರಂಗ ನಮ್ಮ longdrive ಸಂಗಾತಿಗಳಾಗಿದ್ದವು.ಪುಸ್ತಕವನ್ನು ಮರೆತು ತುಳಿದರೆ, ಸರಸ್ವತಿ, ತುಳಿಯ ಬೇಡ ಎಂಬ ವಾರ್ನಿಂಗ್ ಸಿಗುತ್ತಿತ್ತು.ಈಗ ಮೊಬೈಲ್ ಬಂದ್ಮೇಲೆ ಪುಸ್ತಕದ ಆಕರ್ಷಣೆ ಸ್ವಲ್ಪಮಸುಕಾದರೂ.ಈಗಲೂ ಎಲ್ಲೋ ಕೇಳಿದ ನೆನಪು.”ತಲೆ ತಗ್ಗಿಸಿ ಓದು,ಪುಸ್ತಕ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ. ತಲೆ ತಗ್ಗಿಸಿ ಮೊಬೈಲ್ ನೋಡು,ಅದು ನಿನ್ನನ್ನು ತಲೆ ತಗ್ಗಿಸುವಂತೆ ಮಾಡುತ್ತದೆ””
ಇದು ಪುಸ್ತಕದ greatnness.

ಎಷ್ಟೋ ಸಾರಿ ಮನೆಯಲ್ಲಿ ಎಲ್ಲರ ಕಣ್ಣು ತಪ್ಪಿಸಿ ಕಾದಂಬರಿ ಓದುತ್ತಿದ್ದೆವು. ಆದರೆ ಈಗ  ನಮ್ಮ ಸಮಯವನ್ನು  ಇಂಟರ್ನೆಟ್ ನುಂಗುತ್ತಿದೆ. ಆದರೂ ಮಾಲ್ ಗಳಿಗೆ ಹೋಗಿ ಪುಸ್ತಕ ಸರ್ಚ್ ಮಾಡುವವರಿಗೆ ಏನೂ ಕೊರತೆಯಿಲ್ಲ.
ಈಗಲೂ ಭೈರಪ್ಪನವರ ಪುಸ್ತಕ ರಿಲೀಸ್ ಆಗುತ್ತಿದೆ ಎಂದು ಗೊತ್ತಾದರೆ ಸಾಕು, ಮುಗಿ ಬೀಳುವವರಿದ್ದಾರೆ. ರವಿ ಬೆಳಗೆರೆಯ ಪುಸ್ತಕಗಳು. ಯಂಡಮೂರಿ ವೀರೇಂದ್ರನಾಥ್ ಅವರ   “” ಯಶಸ್ಸಿನ ಸೂತ್ರಗಳು”” ಎಂಬ ಪುಸ್ತಕಗಳು ಬಿಸಿ ದೋಸೆ ಗಳಂತೆ ಖರ್ಚಾಗುತ್ತಿದ್ದವು.ಹ್ಯಾರಿ ಪಾಟರ್ ರ ಪುಸ್ತಕಗಳು ಭರ್ಜರಿಯಾಗಿ ಮಾರಾಟವಾಗಿ   ದಾಖಲೆ ಸೃಷ್ಟಿಸಿವೆ.

ಎಷ್ಟೋ ಮನರಂಜನೆಯ ಸಾಮಗ್ರಿಗಳು ಇದ್ದರೂ ,ಬದುಕಿನ ದಿಕ್ಕನ್ನು ಸರಿಯಾಗಿ  ನಡೆಸುವ, ಜ್ಞಾನ ಭಂಡಾರದ ಕೀಲಿಕೈ ಎಂದರೆ ಅದು ಪುಸ್ತಕಗಳು ಮಾತ್ರ.ಬನ್ನಿ, ಮತ್ತೊಮ್ಮೆ  ಓದುವುದನ್ನು ಸಂಭ್ರಮಿಸೋಣ.


About The Author

Leave a Reply

You cannot copy content of this page

Scroll to Top