ಉತ್ತಮ ಎ. ದೊಡ್ಮನಿ ಅವರ ಕವಿತೆ-ಕಳೆದುಕೊಂಡವಳು

ಬಾ ಗೆಳತಿ ಜೊತೆಯಗಿ ನಡೆಯೋಣ
ಬಾಳೆಂಬ ಈ ಪಯಣದಿ
ದೂರ-ದೂರಾ…ಸಾಗೋಣ, ಲೋಕದ ಹಂಗು ತೊರೆದು
ನಾ ನಿನಗೆ, ನೀ ನನಗೆ, ಸಾಕಲ್ವೆ ಈ ಜನ್ಮಕೆ

ಭುಜಕೆ-ಭುಜ ತಾಕಿಸುತಾ
ಒಬ್ಬರ ಕೈ ಒಬ್ಬರು ಅದಿಮುತ
ಬೆಟ್ಟಗಳ ಕಾಲು ದಾರಿಯಲ್ಲಿ
ಮುಸಂಜೆ ಹೋತ್ತಿನಲ್ಲಿ
ಇಬ್ಬನಿ ಜೊತೆ ವಿಹಾರಿಸೋಣ

ಸಮುದ್ರ ಮೇಲಿನ ತಂಗಾಳಿ ಜೊತೆ
ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ
ಕಡಲು ಬಾನು ಒಂದಾಗುವ ಹೊತ್ತಿಗೆ
ಬದಕು ಕಟ್ಟೋಣ

ಒಂದೆ ಕೊಡೆ ಕೆಳಗೆ ಮೈಗೆ ಮೈ ಉಜ್ಜುತ
ಜಿನುಗುತ್ತಿರುವ ಮಳೆಯಲ್ಲಿ ಮಿಂದು
ಮನಸುಗಳ ಘರ್ಷಣೆಯಲ್ಲಿ ಬೆರೆತು
ಆಕಾಶದಾಚೆ ತೇಲೋಣ

ಸಮುದ್ರದ ದಂಡೆಯ ಮೇಲೆ ಕುಳಿತು
ತಂಪಾದ ಗಾಳಿ ಸವಿಯುತಾ
ಕಣ್ಣಲ್ಲಿ ಕಣ್ಣಿಟ್ಟು, ಹಣೆಗೆ ಮುತ್ತಿಡುತ್ತಾ
ಕನಸುಗಳಾಚೆ ಬದುಕಿ ಬಿಡೋಣ

ಮತ್ತೇಕೆ ತಡಾ, ಬಂದಿ ಬಿಡು
ಎದೆಯ ಗೂಡಿನೊಳಗೆ
ತಾಯಿಯ ಮಡಿಲು ನೀಡುವೆ
ಏನು ತಾಕದಾಗೆ ಅಪ್ಪನ ಹೆಗಲಾಗುವೆ
ಬಾ ಗೆಳತಿ ಲೋಕದ ಹಂಗೇತಕೆ

ಬಾ ಗೆಳತಿ ಜೊತೆಯಗಿ ನಡೆಯೋಣ
ಬಾಳೆಂಬ ಈ ಪಯಣದಿ
ದೂರ-ದೂರಾ…ಸಾಗೋಣ, ಲೋಕದ ಹಂಗು ತೊರೆದು
ನಾ ನಿನಗೆ, ನೀ ನನಗೆ, ಸಾಕಲ್ವೆ ಈ ಜನ್ಮಕೆ

ಭುಜಕೆ-ಭುಜ ತಾಕಿಸುತಾ
ಒಬ್ಬರ ಕೈ ಒಬ್ಬರು ಅದಿಮುತ
ಬೆಟ್ಟಗಳ ಕಾಲು ದಾರಿಯಲ್ಲಿ
ಮುಸಂಜೆ ಹೋತ್ತಿನಲ್ಲಿ
ಇಬ್ಬನಿ ಜೊತೆ ವಿಹಾರಿಸೋಣ

ಸಮುದ್ರ ಮೇಲಿನ ತಂಗಾಳಿ ಜೊತೆ
ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ
ಕಡಲು ಬಾನು ಒಂದಾಗುವ ಹೊತ್ತಿಗೆ
ಬದಕು ಕಟ್ಟೋಣ

ಒಂದೆ ಕೊಡೆ ಕೆಳಗೆ ಮೈಗೆ ಮೈ ಉಜ್ಜುತ
ಜಿನುಗುತ್ತಿರುವ ಮಳೆಯಲ್ಲಿ ಮಿಂದು
ಮನಸುಗಳ ಘರ್ಷಣೆಯಲ್ಲಿ ಬೆರೆತು
ಆಕಾಶದಾಚೆ ತೇಲೋಣ

ಸಮುದ್ರದ ದಂಡೆಯ ಮೇಲೆ ಕುಳಿತು
ತಂಪಾದ ಗಾಳಿ ಸವಿಯುತಾ
ಕಣ್ಣಲ್ಲಿ ಕಣ್ಣಿಟ್ಟು, ಹಣೆಗೆ ಮುತ್ತಿಡುತ್ತಾ
ಕನಸುಗಳಾಚೆ ಬದುಕಿ ಬಿಡೋಣ

ಮತ್ತೇಕೆ ತಡಾ, ಬಂದಿ ಬಿಡು
ಎದೆಯ ಗೂಡಿನೊಳಗೆ
ತಾಯಿಯ ಮಡಿಲು ನೀಡುವೆ
ಏನು ತಾಕದಾಗೆ ಅಪ್ಪನ ಹೆಗಲಾಗುವೆ
ಬಾ ಗೆಳತಿ ಲೋಕದ ಹಂಗೇತಕೆ


6 thoughts on “ಉತ್ತಮ ಎ. ದೊಡ್ಮನಿ ಅವರ ಕವಿತೆ-ಕಳೆದುಕೊಂಡವಳು

  1. ಕವಿತೆ ಚೆನ್ನಾಗಿ ಮೂಡಿ ಬಂದಿದೆ,ಕಣ್ತಪ್ಪಿನಿಂದ ಕೆಲವು ಅಕ್ಷರ ದೋಷಗಳು ಇವೆ,ತಿದ್ದಬಹುದು.

Leave a Reply

Back To Top