ಬಸವಣ್ಣನೇ ಗುರು
 ಪ್ರಭುದೇವರೆ ಲಿಂಗ ಸಿದ್ದರಾಮಯ್ಯನೇ ಜಂಗಮ ಮಡಿವಾಳಯ್ಯನೇ ಜಂಗಮ
 ಚನ್ನ ಬಸವಣ್ಣನೆನ್ನ
 ಪರಮಾರಾಧ್ಯರು ಇನ್ನು ಸುಖಿಯಾದೃನು ಮಲ್ಲಿಕಾರ್ಜುನಯ್ಯಾ

ಜಗತ್ತಿನ ಪ್ರಥಮ ಸಂಸತ್ ಎಂದು ಹೆಸರಾದ  ಅನುಭವ ಮಂಟಪವನ್ನು ಸ್ಥಾಪಿಸಿದ 12ನೆಯ ಶತಮಾನದ  ಸಂಸ್ಕೃತಿಕ ನಾಯಕರಾದ ಅಣ್ಣ ಬಸವಣ್ಣನವರು ಶೋಧಿಸಿದ ಒಂದು ಅನುಭವ ಮಂಟಪ ಅಲ್ಲಿ ಎಲ್ಲಾ ಕಾಯಕ ಜೀವಿಗಳು ತಮ್ಮ ಕಾಯಕ ವೃತ್ತಿಯಿಂದ ಪ್ರಾಮಾಣಿಕವಾಗಿ ಶ್ರಮಜೀವಿಗಳಾಗಿ ದುಡಿಯುವ ಶರಣರಾಗಿದ್ದರು ಅಲ್ಲಿ ಬಸವಣ್ಣನವರು, ಅಲ್ಲಮಪ್ರಭುಗಳು ,ಸಿದ್ದರಾಮಯ್ಯ ,ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಅಕ್ಕಮಹಾದೇವಿ ಮುಂತಾದ ಅನೇಕರು ಅತ್ಯಂತ ಕೆಳ ಸಮುದಾಯಗಳಿಗೂ ಕೂಡ ಸಮಾನತೆಯನ್ನು ನೀಡುವಲ್ಲಿ ಶ್ರಮಿಸಿದಂತವರು ಅಂತಹ ಒಂದು ಅನುಭವದ ಮಂಟಪವನ್ನು ಹುಟ್ಟು ಹಾಕಿದವರು  ಅದರ ಕಾರ್ಯ ವೈಖರಿಯನ್ನು ತಿಳಿದ ಅಕ್ಕಮಹಾದೇವಿಯವರು ಅನುಭವ ಮಂಟಪದಲ್ಲಿರುವ ಬಸವಣ್ಣನವರನ್ನು ಕಾಣಲು ಉದುತಡಿಯಿಂದ ಕಲ್ಯಾಣಕ್ಕೆ ಬರುತ್ತಾರೆ.

 ಬಸವಣ್ಣನವರೇ ಗುರು

ಕಲ್ಯಾಣದಲ್ಲಿ ಸ್ಥಾಪಿತಗೊಂಡ ಅನುಭವ ಮಂಟಪಕ್ಕೆಹೆಜ್ಜೆ ಹಾಕಿದ ಅಕ್ಕಮಹಾದೇವಿ ಅಲ್ಲಿ ಯಾವುದೇ ರೀತಿಯಾದಂತಹ ಜಾತಿ ,ಲಿಂಗ, ವರ್ಗ, ವರ್ಣ ಎನ್ನುವ ಭೇದ ಭಾವ ಇಲ್ಲದೇ ಎಲ್ಲಾ ಶರಣ ಕಾಯಕ ಜೀವಿಗಳಿಗೆ ಮುಕ್ತವಾದ ಪ್ರವೇಶ ದ್ವಾರವಾಗಿತ್ತು ಶತಶತ ಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಅನೇಕ ಸಮುದಾಯಗಳಿಗೆ ಈ ಶರಣರ ಮಾರ್ಗ ಶರಣರ ಮಹಿಮೆ ಶರಣರ ಕಾಯಕ ಇವರ ದಾಸೋಹವನ್ನು ಕಂಡು ಅವರ ಮಹಿಮೆಯನ್ನು ಕಂಡು ಬಸವಣ್ಣನವರನ್ನು ಹಾಗೂ ಅಲ್ಲಮಪ್ರಭುಗಳನ್ನು ಕಾಣಲು ಅಕ್ಕ  ಅನುಭವ ಮಂಟಪಕ್ಕೆ ಬರುತ್ತಾರೆ ಅನುಭವ ಮಂಟಪದಲ್ಲಿರುವ ಬಸವಣ್ಣನವರನ್ನು ಕಂಡು ಬಸವಣ್ಣನವರೇ ನನ್ನ ಅರಿವಿನ ಗುರುಗಳು  ಎನ್ನುವರು ಅಕ್ಕ. ವಿಶ್ವಜ್ಯೋತಿ ಜಗಜ್ಯೋತಿ ಜಗಕ್ಕೆ ಗುರುವಾದಂತವರು
 ಬಸವಣ್ಣನವರನ್ನು ತನ್ನ ಗುರುಗಳೆಂದು ಮನದಲ್ಲಿ ಆರಾಧಿಸುವ ಅಕ್ಕ ಗುರು ನಮನಗಳನ್ನು ಮನದಲ್ಲಿ ಆರಾಧಿಸುವ ಅಕ್ಕ ಬಸವಣ್ಣನವರೇ ಎನಗೆ ಗುರು ಎನ್ನುವರು .

 ಪ್ರಭುದೇವರೇ ಲಿಂಗ

 ಪ್ರಭುದೇವರನ್ನು ಲಿಂಗ ರೂಪದಲ್ಲಿ ಕಂಡ ಅಕ್ಕನವರು .ಅನುಭವ ಮಂಟಪ ಧಲ್ಲಿ ಅಲ್ಲಮಪ್ರಭುಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ ಅಕ್ಕನವರು .
ಲಿಂಗ ಸ್ವರೂಪದಲ್ಲಿ ಅಲ್ಲಮಪ್ರಭುಗಳನ್ನು ಕಾಣುತ್ತಾರೆ .
ಅಲ್ಲಮಪ್ರಭುಗಳಲ್ಲಿರುವ ವಿರಕ್ತ ಭಾವವನ್ನು ಕಂಡು ಅಕ್ಕ ಅಲ್ಲಮಪ್ರಭುಗಳನ್ನು ಕರಸ್ಥಲದಲ್ಲಿರುವ ಲಿಂಗಕ್ಕೆ ಹೋಲಿಕೆ ಕೊಟ್ಟು  ಅಲ್ಲಪ್ರಭುದೇವರೇ ಲಿಂಗ   ಎಂದು ಮನದಲ್ಲಿ ಭಾವಿಸಿಕೊಳ್ಳುವರು.

 ಸಿದ್ದರಾಮಯ್ಯನೇ ಜಂಗಮ
 ಮಡಿವಾಳಯ್ಯನೇ ಜಂಗಮ

ಅನುಭಾವವೇ ಜಂಗಮವಾಗಿರುವ ಸಿದ್ದರಾಮಯ್ಯ ಹಾಗೂ ಮಡಿವಾಳಯ್ಯ ಇಲ್ಲಿ ಜಂಗಮ ಎಂದರೆ ಕಾವಿ ಬಟ್ಟೆ ಹಾಕಿ ತಿರುಗುವುದಲ್ಲ.ಸಮಾಜವನ್ನು ತಿದ್ದುವವನೇ ಜಂಗಮ.
ಸಮಾಜ ಸುಧಾರಣೆ ಮಾಡುವ ಮನದ ಕೊಳೆಯನ್ನು ತೊಳೊಯುವ ಜಂಗಮ ಸ್ವರೂಪಿಗಳಾದ ಸಿದ್ದರಾಮಯ್ಯ ಹಾಗೂ ಮಡಿವಾಳಯ್ಯ ನವರೇ ನನಗೆ ಜಂಗಮ ಎನ್ನುವ ಅಕ್ಕನವರ ಮನದ ಭಕ್ತಿಯನ್ನು ಕಾಣುತ್ತೇವೆ .
ಚೈತನ್ಯನ್ನು ಹೊಂದಿದ ಇಡೀ ಜೀವ ಜಗತ್ತು.ನಿರಂತರವಾದ ಚೈತನ್ಯವನ್ನು ತುಂಬುವವನೇ ಜಂಗಮ.ಬದುಕುವ ಮಾರ್ಗ ತೋರುವ ಜಂಗಮ.

 ಚೆನ್ನ ಬಸವಣ್ಣನೆನ್ನ ಪರಮಾರಾಧ್ಯರು
 ಇನ್ನು ಸುಖಿಯಾದೆನು ಚೆನ್ನಮಲ್ಲಿಕಾರ್ಜುನಯ್ಯ

ಚೆನ್ನಬಸವಣ್ಣನವರ ಪಾಂಡಿತ್ಯ ಹಾಗೂ ಅಪಾರವಾದ ಜ್ಞಾನವನ್ನು ಕಂಡು ಅಕ್ಕಮಹಾದೇವಿಯವರು .ಹೇ ಚೆನ್ನಮಲ್ಲಿಕಾರ್ಜುನಾ ನಾನು ಸುಖಿಯಾದೆ ಎನ್ನುವರು.

೦—————————–

Leave a Reply

Back To Top