ಕಾವ್ಯ ಸಂಗಾತಿ
ಗೌರಿ. ಎಸ್.ಬಡಿಗೇರ
ಹೊಸತನದ ಗೀತೆ


ಸ್ವಾಗತಿಸುವ ಮತ್ತೆ ನವವಸಂತವ
ಹರುಷದಿ ನಲಿಯಲು ಬಂದ ವರುಷವ
ಮತ್ತೆ ಮತ್ತೆ ಬರೆಯುವ ಗೀತೆಯಲಿ ಅನುಭವ
ಯುಗದ ಆದಿಯಲ್ಲಿ ಹೊಂಗಿರಣದ ಆಶಾಭಾವ
ಹೊಸತನದ ಗೀತೆ ಹಾಡುವಳು ವನಿತೆ
ಎಲ್ಲವೂ ಸುಂದರ ಎನ್ನುವ ಮಮತೆ
ಮತ್ತೆ ಬರೆಯುವ ಜೀವನದ ಕವಿತೆ
ಗುನುಗುತ ಸಾಗುವ ಮತ್ತೆ ಜೋತೆ
ಮುಗಿದ ಗಳಿಗೆ ಬಾರದು ಬಳಿಗೆ
ಯಾರು ಇರರು ಈ ಜಗದ ಒಳಗೆ
ಇರುವ ತನಕ ತೀರದ ಬಯಕೆ
ಮತ್ತೇ ಹುಡುಕಬೇಕು ಅರಿಯದ ನಾಳೆಗೆ
ಹೊಸತನದ ಗಾಳಿ ಬೀಸುವ ತವಕ
ಹಳೆಯದನ್ನು ಮರೆಯುವ ತನಕ
ಮತ್ತೆ ಅರಳುವ ರವಿಯ ಹೊಂಗಿರಣದ ಚಮಕ
ಹೊತ್ತು ಸಾಗುವ ಭರವಸೆಯನ್ನು ಯಾತ್ರಿಕ
ಬಾ ದಿನ ದಿನವು ನಲಿಯುವ
ಯಾವುದು ಇಲ್ಲಿ ಶಾಶ್ವತ!?
ಅನುದಿನವೂ ಕಾಡುವ ನೆನಪುಗಳ ಭಾವ
ಚಿಗುರೊಡೆಯಲಿ ಮತ್ತೆ ನೂತನದಲಿ ಭರವಸೆಯ ಜೀವ…
ಗೌರಿ. ಎಸ್.ಬಡಿಗೇರ
