ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಭಾವನೆಗಳಿಗೆ ಬೀಗ…….ʼ

ಮನಸ ಮಗು ಹಠ ಹಿಡಿದಿದೆ
ಬೇಡದ ಬಯಕೆಯ ಬಯಸಿ,
ನಿರೀಕ್ಷೆಗಳೇ ನೋವಿಗೆ ಕಾರಣ
ಆದರೂ ……….
ಬೇಡದ ಆಸೆಯ ಬೆನ್ನತ್ತಿ, ಬೆಂಕಿಗೆ ಸಿಲುಕುತಿವೆ ಮುಗ್ದ ಚಿಟ್ಟೆಗಳು …
ಭಾವ ಬದುಕಿನ ಪುಟದಲಿ
ಲೆಕ್ಕಾಚಾರದ್ದೇ ಮೇಲುಗೈ
ಬಂಧು ಬಾಂಧವ್ಯಕ್ಕಿಲ್ಲ ಬೆಲೆಯಿಲ್ಲಿ
ಭಾವನೆಗಳಿಗೆ ಬೀಗ ಹಾಕಲಾಗಿದೆ….
ಅಧಿಕಾರದ ಅಪ್ಪ
ದುಡ್ಡಿನ ದೊಡ್ಡಪ್ಪ
ಇವರದೇ ಫೈನಲ್
ಕಿಮ್ಮತ್ತನ್ನು ಮೂರು ಕಾಸಿಗೆ
ಮಾರಿಕೊಂಡವರೆಲ್ಲ ದೊಡ್ಡವರಾಗಿದ್ದಾರೆ….
ಪಾಪ…..
ಮೊಸಗಾರರ ಸಂತೆಯಲ್ಲಿ
ಪ್ರಾಮಾಣಿಕತೆ
ತನ್ನ ಜಾಗೆಯನ್ನು
ಹಗಲಲ್ಲಿ ದೀಪದೊಂದಿಗೆ
ಹುಡುಕುತ್ತಿದೆ…

ಮೀನಾಕ್ಷಿ ಸೂಡಿ
.