ಶ್ರೀದೇವಿ ಸತ್ಯನಾರಾಯಣ ಅವರ ಕವಿತೆ-ʼಬೇಕಾಗಿದ್ದಾರೆʼ

ಮಳೆ ಹನಿಯಂತೆ ಮನಸ್ಸಿಗೆ ಶಾಂತಿ ತರುವವರು,
ಕನಸ ಮೊಗ್ಗನ್ನು ಪಂಕಜದಂತೆ ಅರಳಿಸುವರು,

ಸಂತೋಷದ ಕ್ಷಣಗಳಲ್ಲಿ ಹರ್ಷ ಹೆಚ್ಚಿಸುವವರು,
ದುಃಖದ ಹೊತ್ತಿನಲ್ಲಿ ಕೈಹಿಡಿದು ನಡೆಸುವವರು,

ಬೇಸಿಗೆಯಲಿ ಹಸಿರ ಛಾಯೆಯಂತೆ ಹಿತವಾದವವರು,
ಬಾಳ ನಡಿಗೆಗೆ ಸವಿ ಬೆಳಕು ನಿತ್ಯ ಚೆಲ್ಲುವವರು,

ಹೃದಯವ ದೀವಿಗೆಯಂತೆ ಬೆಳಗುವವರು
ನಂಬಿ, ನಂಬಿಕೆಯ ಉಳಿಸಿ ಪ್ರೀತಿಸುವವರು,

ಹಠ, ಹಣದ, ಸಮಯದ ಬೇಡಿಕೆಯು ಇಲ್ಲದವರು
ಹಿತಕರ..ಆಹಾ ಹಿತವೋ ಎನುವ ಸ್ನೇಹ ಬಯಸುವವರು
ಎಲ್ಲಾ ಕಾಲಕ್ಕೂ ಸರ್ವರಿಗೂ ಸರ್ವೆಡೆ ಬೇಕಾಗಿದ್ದಾರೆ.


Leave a Reply

Back To Top