ಲೇಖನ ಸಂಗಾತಿ
ರೇವತಿ ಶ್ರೀಕಾಂತ್
ವಚನೇ ಕಿಮ್ ದರಿದ್ರ

ಹಣಕ್ಕೆ ಮೂರು ಗತಿಗಳಿದೆ. ಒಂದು ದಾನ, ಎರಡನೆಯದು ಭೋಗ ಮೂರನೆಯದು ನಾಶ. ಸಂಪಾದಿಸಿದ ಹಣದಲ್ಲಿ ಸ್ವಲ್ಪವಾದರೂ ದಾನ ಮಾಡಬೇಕು ಅಥವಾ ತಾನೇ ಉಪಯೋಗಿಸಿ ಸಂತೋಷ ಪಡಬೇಕು. ಎರಡೂ ಮಾಡದಿದ್ದರೆ ಅದು mooraneyavara ಕೈಗೆ ಸೇರಿ ನಾಶ ಹೊಂಡುತ್ತದೆ. ಇದೊಂದು ಸಂಸ್ಕೃತದ ಸುಭಾಷಿತದ ಅರ್ಥ. ಎಷ್ಟು ನಿಜ ಅಲ್ಲವಾ ಯಾರೋ ಸಂಪಾದಿಸಿದ ಹಣವನ್ನು ಯಾರೋ ಕರ್ಚು ಮಾಡುವಾಗ ಯಾವಾಗ ತಡೆಯೂ ಇರುವುದಿಲ್ಲ.
ಇಷ್ಟೆಲ್ಲಾ ಸಂಪಾದಿಸಿ ದಾನ ಮಾಡಬೇಕೆಂದರೆ ಮನಸು ಹಿಡಿದಂತೆ ಆಗುತ್ತದೆ. ಅದು ಅವರತದಿಂದಾಗಿ ಆದರೆ ಯಾವುದೇ ಕರ್ಚು ಮಾಡದೆ ಯಾವುದೇ ಪರಿಶ್ರಮವಿಲ್ಲದೆಇನ್ನೊಬ್ಬರಿಗೆ ಸಂತೋಷ ಕೊಡಬಹುದಾದ ಸರಳ ದಾರಿ ಎಂದರೆ ಒಂದು ಒಳ್ಳೆಯ ಮಾತು, ಮುಖದಲ್ಲಿ ಒಂದು ನಗು… ಇದಕ್ಕೆ ಏನು ಖರ್ಚು ಮಾಡಬೇಕು? ನಮ್ಮಲ್ಲಿ ಮಾತಿಗೆ ಕೊರತೆ ಇದೆಯೇ? ಸಲ್ಲದ ಬಿಗುಮಾನವನ್ನು ಮುಖದಲ್ಲಿ ಲೇಪಿಸಿಕೊಂಡು ಒದಗದ ಯಾರನ್ನೋ ನಮ್ಮವರೆಂದುಕೊಂಡು, ಕೊನೆಗೆ ಒಂಟಿಯಾಗಿ ಉಳಿದುಬಿಡುತ್ತೇವೆ. ಇದೇ ಜೀವನ ಅಲ್ಲ. ಇದು ನಾವು ನಿರ್ಮಿಸಿಕೊಂಡ ಪೊಳ್ಳು ವ್ಯಕ್ತಿತ್ವ ಅದನ್ನು ಸತ್ವತವಾಗಿ ಮಾಡುವುದು ನಮ್ಮ ಕೈಯಲ್ಲಿದೆ.

ಮಾತಿನ ಬಗ್ಗೆ ಅನೇಕರು ವ್ಯಾಖ್ಯಾನಿಸಿದ್ದಾರೆ. ಉದಾಹರಣೆ “ಮಾತೇ ಮುತ್ತು ಮಾತೇ ಮೃತ್ಯು”, ಮಾತೇ ಮಾಣಿಕ್ಯ., ನುಡಿದರೆ ಮುತ್ತಿನ ಹಾರದಂತಿರಬೇಕು…..ಇದೆಲ್ಲ ಸೂಚಿಸುವಂತೆ. ಮಾತಿನಲ್ಲಿ ಒಂದು ಪಕ್ವತೆ ಮುಖ್ಯ ಅದರಲ್ಲಿ ಅವಶ್ಯಕತೆಗೆ ತಕ್ಕಂತೆ, ವಿವೇಕ, ವಿಚಾರ… ಎಲ್ಲವೂ ದೊಡ್ಡ ಪಾತ್ರ ವಹಿಸುತ್ತದೆ.
ಮಾತು ಎನ್ನುವುದು ಒಂದು ಚಿಕಿತ್ಸೆ ಕೂಡ ಆಗಬಲ್ಲದು. ಆಪ್ತ ಸಲಹೆಗಾರರು ಎಂದು ಹೇಳಿ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ ತಕ್ಕ ಡಲಹೆ ಕೊಡುತ್ತಾ ಸಾವಿರಾರು ರೂಪಾಯಿ ದಿನಕ್ಕೆ ಸಂಪಾದನೆ ಮಾಡುತ್ತಾರೆ. ಇದು ಮಾತಿನ ಪ್ರಾಮುಖ್ಯತೆ.
ಹಾಗೇ ಮಾತು ಮತ್ತು ಸಲಹೆಗಳನ್ನು ಸಾಕಷ್ಟು ಕೊಡುವ ಉಚಿತ ಸಲಹೆಗಾ ರರೂ ಇದ್ದಾರೆ. ಅದೆಲ್ಲಾ ಹೊರತುಪಡಿಸಿ, ನಮಗೆ ಎದುರಾದವರಿಗೆ ಒಂದು ನಗು, ಹಾಗೂ ಒಳ್ಳೆಯ ಮಾತು, ಪ್ರೀತಿ ಹಂಚಿದರೆ ನಾವು ಕಳೆದುಕೊಳ್ಳಲು ಏನೂ ಇಲ್ಲ. ಪಡೆದಿಕೊಳ್ಳುವುದೇ ಇರುವುದು. ಅಕ್ಕಪಕ್ಕದವರೊಂದಿಗೆ ಸೌಹಾರ್ದತೆ, ಇದೆಲ್ಲಾ ಸಾಮಾಜಿಕ ಸದಾಚಾರ ಎಮಿಸುತ್ತದೆ.

ರೇವತಿ ಶ್ರೀಕಾಂತ್