ಸವಿತಾ ದೇಶಮುಖ ಅವರ ಕವಿತೆ-ದ. ರಾ. ಬೇಂದ್ರೆ

ನೊಂದ- ಬೆಂದ-ಬೇಂದ್ರೆ-ನೀ
ರಾಮಚಂದ್ರ- ಅಂಬ್ಬವ್ವನ ಪುತ್ರ-ನೀ
ಕನ್ನಡ ನುಡಿಯ ಹೃದವಿಂದಾರ-ನೀ
ಕನ್ನಡಾಂಬೆಯ -ವರಕವಿ …..

ನಿನಗ್ಯಾರು ಸಾಟಿ , ನುಡಿ ತಾಳ-ಮೇಳ
-ಶಬ್ದಗಳ ಹೊಯ್ದಾಟ ಕುಣಿದಾಟ
ಎಡಗೈ ಆಟ ನಿಂತಲ್ಲೇ ಕುಳಿಲ್ಲೇ
ರಚಿಸಿದ ಮಹಾಕಾವ್ಯ -ಸೆಡೆ….

ನಕ್ಕು ನಕ್ಕು ಸಾಯಿರಿ ನಕ್ಕು ಸತ್ತು
ನಕ್ಷತ್ರವಾಗಿರಿ… ಅಂತ ಸಾರಿದೆ
ನಾಕುತಂತಿ ,ಅರಳು ಮರಳು
ಮುಗಿಲ ಮಲ್ಲಿಗೆಯಾಗಿ ನಿಂದವು……

ಹರಿತ ಭಾವದ ಜೀವ- ತಿಳಿಮುಗಿಲು
ನೂರಾರು ನೋಂದ ಹೃದಯಗಳಿಗೆ
ಹುಮ್ಮಸ್ಸಿನ -ಉದಯ ಹಾಸ
ದುಃಖಿತರ ಬಾಳಿಗೆ ಸುಖದ ಪಾಠ ……

ಸಖಿಗೀತೆ ಗಂಗಾ ಅವತಾರ ನಾದಲೀಲೆಯಲಿ
ಮಿಂದ, ಮೀಸಲಳಿಯದ ಭಾವ ಮರೆತು,
ಹೋಗುವ ಮನಕೆ ಸೌರಭ ನಿನ್ನ ನುಡಿ
ಭಾಷೆ ,ಕರುನಾಡಿಗರ ಮನದ ಗುಡಿಯ ಗರ್ಭದೊಳು

ಪೂಜಿಸುವ ಅಂಬಿಕಾತನೆಯ ದತ್ತ ಕನ್ನಡಿಗರ
ಉರ ಮಂದಸ್ಮಿತ …….

One thought on “ಸವಿತಾ ದೇಶಮುಖ ಅವರ ಕವಿತೆ-ದ. ರಾ. ಬೇಂದ್ರೆ

Leave a Reply

Back To Top