ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು

ಮುಂಜಾನೆ ಮೂಡಿದೆ
ಅರುಣನುದಯವಾಗಿದೆ
ಬಾಳ ಬೆಳಗು ಹರಿದಿದೆ
ಜೀವಕಳೆಯು ನಲಿದಿದೆ

ಮುಗಿಲ ಝಳವು ಸೋಕಿದೆ
ಉರಿಯ ರವಿಯು ಕಂಡಿದೆ
ನೆತ್ತರ ಬಿಸಿಯು ಏರಿದೆ
ಬಾಳ ಛಲವು ಹೆಚ್ಚಿದೆ

ಸಮಯ ಸ್ವಲ್ಪ ಉಳಿದಿದೆ
ಮುಸ್ಸಂಜೆ ಬರುವುದಿದೆ
ಬಾಳ ಪಯಣ ಸಾಗಿದೆ
ಜೀವ ತುಡಿತ ಮಾಗಿದೆ

ಮುಗಿಲ ಸೂರ್ಯ ಜಾರಿದೆ
ಬಾನ ಕೆಂಪು ಚೆಲ್ಲಿದೆ
ಬಾಳ ಮುಸ್ಸಂಜೆ ಕಾದಿದೆ
ಬದುಕು ರಂಗು ಮಾಸಿದೆ

ಬಾನ ಸೂರ್ಯ ಮುಳುಗಿದೆ
ಕತ್ತಲೆಯು ಕವಿದಿದೆ
ಬಾಳ ಕಳೆಯು ಮುಗಿದಿದೆ
ಪಯಣ ಎಲ್ಲಿ ಸಾಗಿದೆ?


One thought on “ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು

Leave a Reply

Back To Top