ವ್ಯಾಸ ಜೋಶಿ ಅವರ ತನಗಗಳು

ಕ್ಷಣ ಪ್ರತಿಕ್ರಿಯೆ
ಆದೀತು ಎಡವಟ್ಟು,
ಕಂಡಂಥ ಪ್ರತ್ಯಕ್ಷವ
ಪ್ರಮಾಣಿಸೋದು ಬಿಟ್ಟು!

ಪ್ರತ್ಯಕ್ಷ ಹಣ್ಣುಗಳ
ಶಬರಿಯ ಪರೀಕ್ಷೆ,
ಎಂಜಲಾದರೂ ಸಿಹಿ
ಪ್ರಮಾಣಿಸಿದ ಸಹಿ.

ಮಣ್ಣು ತಿಂದನೇ? ಕೃಷ್ಣ,
ಸ್ವತಃ ಪ್ರಮಾಣಿಸಿದ
ಬಾಯ್ತೆರೆದು, ತಾಯಿಗೆ
ಬ್ರಹ್ಮಾಂಡವ ತೋರಿದ.

ಎಲ್ಲೆಲ್ಲೂ ದೇವರೆಂದ-
-ಪ್ರಹ್ಲಾದನ ಪರೀಕ್ಷೆ,
ತಂದೆಗೆ ಕಂಬದಲಿ
ನರಸಿಂಹ ಪ್ರತ್ಯಕ್ಷ.

ಕೂಸಿನ ಮಾತುಗಳ
ಶಿವನೇ ಪ್ರಮಾಣಿಸೆ
ಪ್ರತ್ಯಕ್ಷ ಉಣಿಸಿದ
ಕೋಳೂರು ಕೊಡಗೂಸು.

ಕಾಡಿಗ್ಹೋಗಿ ಭರತ
ರಾಮ ಪಾದುಕೆ ತಂದ
ಪಾದುಕೆ ಪಟ್ಟಗಟ್ಟಿ
ನಾ ರಾಜನಲ್ಲೆಂದ.

  

One thought on “ವ್ಯಾಸ ಜೋಶಿ ಅವರ ತನಗಗಳು

Leave a Reply

Back To Top