ಅನುವಾದ ಸಂಗಾತಿ
ಕಾಮನ ಬಿಲ್ಲು
ತೆಲುಗುಕವಿ ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ



ಆ ಮಾನವೀಯತೆಯ ಹೊಳಪು ನಿಮಗೆ ಇಷ್ಟವಾಗುವುದಿಲ್ಲ
ಅವಳ ಮೃದುತ್ವ ನಿಮಗೆ ಇಷ್ಟವಿಲ್ಲ ;
ಆಕೆಯ ನಾವಿನ್ಯತೆಯನ್ನು ಸಂಪ್ರದಾಯಸ್ಥರು ಒಪ್ಪುವುದಿಲ್ಲ ;
ಅವಳ ಕಾಂತಿ ಆ ವ್ಯಕ್ತಿಯನ್ನು ಬೆರಗುಗೊಳಿಸುತ್ತದೆ !!
ಆ ಹುಡುಗಿಯ ಮಿಂಚನ್ನು ಈ ಸಾಮಾನ್ಯ ಮನುಜರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ;
ಆ ಬೆಳಕಿನ ವೇಗವನ್ನು ಆ ವ್ಯಕ್ತಿಗೆ ಸಹಿಸಲಾಗುತ್ತಿಲ್ಲ
ಅವಳ ಮೇಲೆ ಧಾರೆ ಎರೆದ ಪ್ರೀತಿ ; ನಮ್ಮ ಕಣ್ಣುಗಳನ್ನು ತಾಕಿಸುತ್ತದೆ
ಅವಳ ಚುರುಕುತನ ಈ ಆತ್ಮದ ಹೃದಯವನ್ನು ಸುಡುತ್ತದೆ;
ಹೌದು …
ಇದು ಸತ್ಯ
ಕಾಮನಬಿಲ್ಲ ರಂಗು ಹಾಗೂ ಮೋಹಕತೆಯನ್ನು
ಜನರು ಒಳಗಿಳಿಸಿಕೊಳ್ಳಲಾರರು ; ನಮ್ಮೊಳಗಿನ ಬೇಸಿಗೆಯ ಆಕಾಶವನ್ನು ಇಷ್ಟಪಡಲಾರರು
ಓಹ್ !
ನೀಲಿ ಆಕಾಶಕ್ಕೆ ಶಾಶ್ವತ ಸೊಕ್ಕು !
ಸತ್ಯದ ಮಾಲೆಯನ್ನು ಒಮ್ಮೆ ನೋಡಿ
ನಮ್ಮ ಟೀಕೆ ಕುಹಕಗಳು ಉರಿಯುವ ಗುಂಡುಗಳಂತೆ

ನಮ್ಮ ವಕ್ರ ದೃಷ್ಟಿ ಸದಾ ಇಣುಕುತ್ತಿದೆ ;
ಚಲನಶೀಲತೆಗೆ ಇದೇ ತೊಡಕಾಗಿದೆ
ಕೋಪ ಮತ್ತು ಅಳಿವು,
ದುರಹಂಕಾರ ಮತ್ತು ಅಸಹಿಷ್ಣುತೆ, ಯಾವುದರಲ್ಲೂ ಅವರಿಗೆ ಆಸಕ್ತಿಯಿಲ್ಲ, ಸಂಪೂರ್ಣವಾಗಿ ಅವರನ್ನು ಇಷ್ಟಪಡುವುದಿಲ್ಲ.
ಅವರು ಸಂತೋಷ ಹೇಗಿದೆ ಎಂದು ತೋರಿಸುತ್ತಾರೆ, ಬದುಕಿನ ಬಣ್ಣಗಳನ್ನು ಅದರ ರಂಗನ್ನು ಪಣಕ್ಕಿಡುತ್ತಾರೆ
ನೀವು ಸ್ವಲ್ಪ ಯೋಚಿಸಿ ;
ಮತ್ತು ಅವಳು ನೋಡುತ್ತಿರುವಂತೆಯೇ, ನೀವೂ ಬದುಕನ್ನು ನೋಡಬೇಕು !!
ಮೂಲ ಕವಿ ; ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ