ವಾಣಿ ಭಂಡಾರಿ ಅವರ ಗಜಲ್

ಎಷ್ಟೊಂದು ಮಾತುಗಳಿತ್ತು ಆದರೆ ನಿನ್ನ ಮೌನ ಮಾತಾಗಲಿಲ್ಲ
ಎಷ್ಟೊಂದು ವೇದನೆಗಳಿತ್ತು ಆದರೆ ನಿನ್ನ ಮಾತು ಮುತ್ತಾಗಲಿಲ್ಲ.

ಕಾಲವೂ ಕವುಚಿಕೊಂಡಿದೆಯಲ್ಲ ತತ್ರಾಣಿ ಮೆತ್ತಗಾಗಲೇ ಬೇಕಿದೆ
ಎಷ್ಟೊಂದು ಕನಸುಗಳಿತ್ತು ಆದರೆ ನಿನ್ನ ಮನಸು ಕರಗಲಿಲ್ಲ.

ಕತ್ತಲೆ ಬೆಳಕಿನಾಟದಲ್ಲಿ ಅದೆಂತ ಸೊಗಸಿತ್ತು ನೈದಿಲೆಯು ನಾಚುವಂತೆ
ಎಷ್ಟೊಂದು ದುಃಖಗಳಿತ್ತು ಆದರೆ ನಿನ್ನ ಹೃದಯ ಅರಿಯಲಿಲ್ಲ.

ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.

ಕೋರಿಕೆಯ ಸಾಗರ ದಾಟಲು ಎಂತ ಹುಟ್ಟು ಹಾಕಲಿ ಹೇಳು ವಾಣಿ
ಎಷ್ಟೊಂದು ರಾತ್ರಿಗಳಿತ್ತು ಆದರೆ ನಿನ್ನ ಹಮ್ಮು ಮುರಿದು ಬೆಳಕಾಗಲಿಲ್ಲ.


5 thoughts on “ವಾಣಿ ಭಂಡಾರಿ ಅವರ ಗಜಲ್

Leave a Reply

Back To Top