ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಕ್ಷಣ ಪ್ರತಿಕ್ರಿಯೆ
ಆದೀತು ಎಡವಟ್ಟು,
ಕಂಡಂಥ ಪ್ರತ್ಯಕ್ಷವ
ಪ್ರಮಾಣಿಸೋದು ಬಿಟ್ಟು!

ಪ್ರತ್ಯಕ್ಷ ಹಣ್ಣುಗಳ
ಶಬರಿಯ ಪರೀಕ್ಷೆ,
ಎಂಜಲಾದರೂ ಸಿಹಿ
ಪ್ರಮಾಣಿಸಿದ ಸಹಿ.

ಮಣ್ಣು ತಿಂದನೇ? ಕೃಷ್ಣ,
ಸ್ವತಃ ಪ್ರಮಾಣಿಸಿದ
ಬಾಯ್ತೆರೆದು, ತಾಯಿಗೆ
ಬ್ರಹ್ಮಾಂಡವ ತೋರಿದ.

ಎಲ್ಲೆಲ್ಲೂ ದೇವರೆಂದ-
-ಪ್ರಹ್ಲಾದನ ಪರೀಕ್ಷೆ,
ತಂದೆಗೆ ಕಂಬದಲಿ
ನರಸಿಂಹ ಪ್ರತ್ಯಕ್ಷ.

ಕೂಸಿನ ಮಾತುಗಳ
ಶಿವನೇ ಪ್ರಮಾಣಿಸೆ
ಪ್ರತ್ಯಕ್ಷ ಉಣಿಸಿದ
ಕೋಳೂರು ಕೊಡಗೂಸು.

ಕಾಡಿಗ್ಹೋಗಿ ಭರತ
ರಾಮ ಪಾದುಕೆ ತಂದ
ಪಾದುಕೆ ಪಟ್ಟಗಟ್ಟಿ
ನಾ ರಾಜನಲ್ಲೆಂದ.

—————————-

About The Author

Leave a Reply

You cannot copy content of this page

Scroll to Top