ಎಂ. ಬಿ. ಸಂತೋಷ್ ಅವರ ಕವಿತೆ-ʼಮೌನವೇಕೆ ಹೇಳು?ʼ

ಮಾತು ಮುರಿದು ಮೌನವಾದೆ
ಏಕೆ ಹೇಳು ನೀನು?
ನಮ್ಮಿಬ್ಬರ ಬದುಕಿನಲಿ
ಈ ಮೌನವು ಸರಿಯೇನು?

ಮೌನ ಮುರಿದು
ಹರುಷ ನೀಡು
ಇರುವೆನು ನಲ್ಲೆ
ನಾ ನಿನ್ನ ಜೊತೆಯಲ್ಲೆ

ತಪ್ಪು – ಒಪ್ಪು ಕಾಣುತ್ತಿಲ್ಲ
ನಮ್ಮೀ ಪ್ರೀತಿ ನಡುವೆ
ಬಿಗಿದಪ್ಪಿ ಮುದ್ದಾಡಿದ
ಆ ಸವಿ ನೆನಪು
ನಾನೆಂದು ಮರೆಯೋದಿಲ್ಲ

ಮರೆಯದಿರು ನಲ್ಲೆ
ನೀನಿರುವುದೇ ನನಗೋಸ್ಕರ
ಅದಕ್ಕಾಗಿ ಪಡೆದಿರುವೆ
ಆ ಬ್ರಹ್ಮನಿಂದ ನಾ ಹಸ್ತಾಕ್ಷರ

ಮೌನ ಮುರಿದು ಬಳಿ ಬಂದರೆ
ಎರಡು ಜೀವಗಳ ಮಿಲನ
ಪ್ರೀತಿ ಮರೆತು
ನೀ ದೂರ ಸರಿದರೆ
ನಮ್ಮೀ ಬದುಕು ನೀರಿಲ್ಲದ
ದೋಣಿಯ ಪಯಣ……


One thought on “ಎಂ. ಬಿ. ಸಂತೋಷ್ ಅವರ ಕವಿತೆ-ʼಮೌನವೇಕೆ ಹೇಳು?ʼ

Leave a Reply

Back To Top