ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಶಾಂತಿ ಸಿಗುವುದೆಲ್ಲಿ ?
ಎಲೆ ಮಾನವ ಹುಡುಕುತಿರುವೆ ಎಲ್ಲಿ
ಶಾಂತಿ ನೀ ಅದು ನಿನ್ನಲ್ಲಡಗಿರುವಾಗ?
ದುಷ್ಟ ದುರ್ಬುದ್ದಿ ದುರಾಸೆಯಡಿಯಲಿ ಹುದುಗಿಹೋಗಿದೆ ಹುಡುಕಿ ನೋಡು
ಮಮತೆ ಪ್ರೀತಿ ಒಲುಮೆ ಝೇಂಕಾರಕೆ
ಸೆರೆಸಿಕ್ಕು ನೋಡು ಮನಸಾರೆ ಒಮ್ಮೆ
ಆಳ ಅರಿಯದೆ ಬಲೆಯ ಸರಿಸದೆ ಇರು
ಆಗ ನಿನ್ನರಿವೆ ನಿನಗಾಗಿ ಶಾಂತಿ ಸಿಗುವುದು
ಸಂಕಟ ಮಾತ್ರವಲ್ಲ ಜೇನುಸವಿಯಿದೆ
ದೇವನ ಸೃಷ್ಟಿಯಲಿ ಕಚ್ಚುವ ಜೇನಲಿ
ಮಕರಂದ ಸವಿಯಿದೆ ದೇವನೊಲುಮೆಯಿದೆ ಪ್ರತಿಕ್ಷಣ ವಿಸ್ಮಯ ನಂಬಿಕೆಯಲಿ
ಬೃಂಗದಾ ಬೆನ್ನೇರಿ ತಿರುಗದಿರು
ಹುಚ್ಚನಾಗುವೆ ಎಲೆ ಮನವೇ
ಅಂತರಾಳದ ಭಾವನೆಗಳ ಪುಳಕತೆ
ಬೆಲೆಕೊಟ್ಟು ನೋಡು ಶಾಂತಿ ನಿನ್ನಲ್ಲೇ
ಸತ್ಯ ಕರುಣೆ ಸಹಾಯ ಸಹಕಾರ
ಆತ್ಮವಿಶ್ವಾಸಕೆ ಸ್ನೇಹವ ನಂಬಿಕೆಯಲಿ
ನಾನಿದ್ದೇನೆ ಎನ್ನುವ ಭರವಸೆಯ ಮಾತಲ್ಲಿ ಅಡಗಿರುವ ಶಾಂತಿಯ ಹೆಕ್ಕಿ ಕುಡಿಯಬೇಕಷ್ಟೇ
————————————-
ಲಲಿತಾ ಕ್ಯಾಸನ್ನವರ