ಸತೀಶ್ ಬಿಳಿಯೂರು ಅವರ ಕವಿತೆ-ಮುಕುಟಮಣಿ

ಗುರಿ ಸಾಧಿಸೋ ಛಲವಂತೆ
ಈ ಮಣ್ಣಲ್ಲಿ ನಿಂತಳು ಕಲ್ಲಿನಂತೆ
ಎದೆಗುಂದದೆ ಯಶಸ್ಸಿನ ಪಥ ಏರಿ
ಜಯಿಸುವುದೇ ಇವಳ ಮೊದಲ ಗುರಿ
 
ಬಡತನವು ಶಾಪವಾಗಿರಲು
ಕಟ್ಟುಪಾಡುಗಳೇ ಅಡ್ಡಗಾಲಿಡಲು
ಬಯಸಲು ಫಲವೆಲ್ಲಿದೆ ಇಲ್ಲಿ
ಆದರೂ ಕೊನೆಗೊಳ್ಳಲಿಲ್ಲ ಯಾನವಿಲ್ಲಿ

ಕಲ್ಲಿನಲ್ಲಿ ಕಲೆ ಹುಡುಕುವ ಭಾರತದಲ್ಲಿ
ಕಾಡುಗಲ್ಲಿಗೂ ಶಿಲ್ಪವಾಗುವ ಬಯಕೆಯಿಲ್ಲಿ
ಉಳಿ ಪೆಟ್ಟು ತಿಂದು ಗುಡಿ ಸೇರುವ ತನಕ
ಮತ್ತೆ  ಕೊರಳಿಗೆ ಬಂಗಾರದ ಪದಕ

ಛಲದಿಂದ ಸಾಧಿಸಿದರೆ ನೀ ಗುರಿ
ಯಾವತ್ತು ಭಾರತ ದೇಶಕ್ಕೆ ಮಾದರಿ
ಈ ನೆಲದಲಿ ನೀ ಪುಟ್ಟ ಮಣಿ
ಸೇರು ಭಾರತಾಂಬೆಯ ಮುಕುಟಮಣಿ

—————————–

Leave a Reply

Back To Top