ಸವಿತಾ ದೇಶಮುಖ ಅವರ ಕವಿತೆ-ಲಲನೆ

ಲಲನೆಯಾಗಿ ಕುಡಿ ಕುದುರಿ
ಅಮ್ಮನ ಸೌಖ್ಯದ ಗರ್ಭದಿ
ಬೆಳೆಯುತ್ತಿರೆ ಬಾಹ್ಯಾಂತರಂಗದಿ….

ಅಮ್ಮ ನಿನ್ನ. ಸುರಕ್ಷಾ ಕವಚದಿ
ಬಲಿತು ಹೊಮ್ಮುತ್ತಿದೆ -ಕಂದಮ್ಮನಾಗಿ
ನಿನ್ನ ಒಡಲ ಬಿಟ್ಟು  ಮಡಿಲು ಸೇರುವ.

ಆತುರ  ಕಾತರದಲ್ಲಿದ್ದೆನಲ್ಲಮ್ಮ ….
ನಿನ್ನ ಪ್ರೀತಿಯ ಆಗರದಿ ಬೆಚ್ಚನೆ
ಚಿಗುರುತ್ತಿದೆನಲ್ಲಾ ಅಮ್ಮ….

ಮನೆ ಮನಗಳ ಅಂಗಳದಿ-ಆಡುತ
ನಲಿದಾಡುತ್ತ  ಕುಣಿದಾಡುತ್ತಾ
ಬಣ್ಣ ಬಣ್ಣದ  ಅಂಗಿಯ ತೊಟ್ಟ …

“ಹೊಂಗನಸು ಹೊತ್ತು

ಎನಗೇನು ಗೊತ್ತು ಅಮ್ಮ, ನಾನು
ಹೆಣ್ಣು ಅಂಗೈಯ ಹುಣ್ಣೆಂದು
ಕಿತ್ತು ತೆಗೆವರೆಂದು…..ನಿನ್ನ ಪುಟ್ಟ …

ಗರ್ಭವೇ ಸ್ವರ್ಗ ಲೋಕವಾಗಿತ್ತು
ಅದುವೇ ದೇವಲೋಕವಿತ್ತು
ಕಿತ್ತು ಹಿಸುಕಿದರು ಕೊಚ್ಚಿಕೊಂಡ್ವೋದ

ಆರ್ಭಟವು ಕೇಳಿ ಹೆದರಿದನಲ್ಲಾ
ಅಮ್ಮ ರಕ್ಷಿಸದಾದೆ ನಿನ್ನ ಉದರ,
ನನ್ನ ಭವಿಷ್ಯದ ತಾಣವಮ್ಮ….
 
ಸಾಕಿದವಳು ನೀನೇ  ನೂಕುವದು
ತರವೆ ?ನಾನ್ಯಾರಿಗೆ ಮೊರೆ ಹೋಗಲಿ
ಯಾರನು ಪ್ರಶ್ನಿಸಲಿ…?

 ನಾನೇಕೆ ಅಸುರಕ್ಷಿತಳು
ಏಕೆ ಅಮಾಯಕಳು -ಅಬಲೆಯು,
ಯಾಕೆ ನನ್ನ ಉಸಿರು ಹಿಚುಕುವರು

ಭೂಮಿಗೆ ಬರುವ ಮುನ್ನವೇ…..

ಅದೆಂದು ನಿಮ್ಮ ಮನದ
 ಕತ್ತಲೆ ಕಳೆವದು ???
ಕರಳು ಕೊರೆಯುವ ಪ್ರಶ್ನೆಗೆ
ಉತ್ತರವಿಸುವರಾರು ಅಮ್ಮ….. ?????

One thought on “ಸವಿತಾ ದೇಶಮುಖ ಅವರ ಕವಿತೆ-ಲಲನೆ

Leave a Reply

Back To Top