ಶಾರದಜೈರಾಂ.ಬಿ ಅವರ ಕವಿತೆ ಅವಳೆಂದರೆ

ಅವಳೆಂದರೆ….
ಅನಾದಿಕಾಲದಿಂದಲೂ ಇಂದಿಗೂ
ಹೊಸಿಲ ದಾಟಲು ಹಲವಾರು
ಲಕ್ಷ್ಮಣ ರೇಖೆಗಳು
ಅಹಲ್ಯೆ ಸೀತೆ ಮಾಧವಿಗಾದುದು ಇದೇ ಗೋಳು ಅದೇ ಬಾಳು
ದಿಟ್ಟತನದಿಂದ ಕೆಲವರು ಪಡೆದಿಹರು
ಉಳಿದವರು ಬಿಕ್ಕುತಿಹರು
ಬಾಗಿಲ ಮರೆಯಲ್ಲಿ
ನಾರಿ ದೇವತೆ ಸ್ವರೂಪ
ಎಂದು ಭಾಷಣಗಳಿಗಷ್ಟೇ
ಭೂಷಣ
ಅನುಕರಣೆಗೆ ಭಣಭಣ
ಅನುನಯದಿ ಆದರಿಸಿದರೆ
ಅಪ್ಪಟ ಅಪರಂಜಿ ಅವಳು
ಅವಳೆಂದರೆ… ಹೀಗೆ.

One thought on “ಶಾರದಜೈರಾಂ.ಬಿ ಅವರ ಕವಿತೆ ಅವಳೆಂದರೆ

  1. ಉದ್ಯಮವಾದ ಕವಿತೆ ಓದಿ ಆನಂದಿಸಿದೆ ಹೀಗೆ ಮುಂದುವರೆಯಲಿ ನಿಮ್ಮ ಸಾಹಿತ್ಯ ಪಯಣ,

Leave a Reply

Back To Top