ಗಾಯತ್ರಿ ಎಸ್‌ ಕೆ ಅವರ ಕವಿತೆ-ಸೃಷ್ಟಿಯ ಹೆಣ್ಣು

ಹೆಣ್ಣು ಜಗದ ಸೃಷ್ಟಿ
ಪೂಜನೀಯ ದೃಷ್ಟಿ
ತಾಳ್ಮೆಯ ಪ್ರತಿರೂಪ
ಸಹನೆಯ ದೀಪ..||

ಸಹಕಾರ ನಲ್ಮೆಅವಳು
ಜಾಣ್ಮೆಯ ಕೀರ್ತಿಯವಳು
ಸಂಸಾರ ನಡೆಸುತ ಜತನ
ಜೋಪಾನ ಮಾಡುವಳು..||

ಸರಿಸಮ ದುಡಿಯುತ
ಕುಟುಂಬದ ಏಳ್ಗೆ ಬಯಸುತ
ಬಾಳ ಜ್ಯೋತಿಯು
ಮನೆತನಕ್ಕೆ ಕೀರ್ತಿಯೂ
ತರುವವಳು..||

ತಾರತಮ್ಯ ಅವಳಲ್ಲಿಲ್ಲ
ಸಂಕುಚಿತೆ ಅವಳಲ್ಲ
ವಿಶಾಲಮನೋಭಾವದ
ಸೃಷ್ಟಿಯ ಕಣ್ಣವಳು..||

ಕಾರ್ಯಕ್ಷಮತೆ ಧೈರ್ಯ
ಅಸಾಧಾರಣ ಶಕ್ತಿ
ಅಭಿವ್ಯಕ್ತಿ ಯವಳು
ಮುಂದಾಲೋಚನೆಯ
ಹೆಣ್ಣವಳು..!!

—————————–

Leave a Reply

Back To Top