ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ಕನಸಲು ಕಾವಲಿರುವೆ


ಚಿಂತಿಸದಿರು ಮುದ್ದು ನಲ್ಲೆ
ಸದಾ ನಾ ಜೊತೆ ಇರುವೆ ನಲ್ಲೆ
ಕಂಬನಿ ಹನಿಗೂಡದಂತೆ ಕಾಯುವೆ
ನಿನ್ನ ಹಾದಿಗೆ ಹೂವ ಚೆಲ್ಲುವೆ
ಬಯಸಿ ಪಡೆದ ಸುಮ ನೀನು
ಬಾಳ ತುಂಬಿದ ಪ್ರೀತಿ ನೀನು
ನಾ ನಿನ್ನ ಕಣ್ಣ ರೆಪ್ಪೆಯಾಗುವೆ
ನಿನ್ನ ಕನಸಿನಲು ಕಾವಲಿರುವೆ
ಪ್ರೀತಿ ಒಂದೇ ಬಾಳಿಗೆ ವರವು
ಇದು ದೈವಬೆಸೆದ ಅನುರಾಗವು
ನಾ ನಿನಗೆ ನೀ ನನಗೆ ಎನ್ನುತ
ಬಾಳೋಣ ಪ್ರೀತಿ ದೀಪವ ಬೆಳಗುತ
————-

ಮಧುಮಾಲತಿ ರುದ್ರೇಶ್ ಬೇಲೂರು
ತುಂಬು ಧನ್ಯವಾದಗಳು ತಮಗೆ