ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ನಕ್ಕ ನಗುವೊಳು…..
ನೀ ನಕ್ಕ ನಗುವೊಳು
ಚೆಂದ ಕನಸುಗಳು ನೂರು
ನಿನ್ನ ಒಲವ ಹಣತೆಯಲಿ
ಬೆಳದಿಂಗಳ ಸೂರು…….
ಒಲವಲ್ಲಿ ಗೆಲುವು
ನಿನ್ನ ಮಾತಿನ ಮುನ್ನುಡಿ
ಮಾತಲ್ಲಿ ಹೂವಿನ ಎಳೆ
ನಿನ್ನ ಕೋಪದ ಬೆನ್ನುಡಿ…..
ನೀ ಹೇಳುವ ಕಥೆಯದು
ಗುನು ಗುನಿಸುವ ಪಲ್ಲವಿ
ನೀ ಆಡದ ಮಾತದು
ಮೌನದ ಸವಿನುಡಿ……
ನೀ ಹೆಜ್ಜೆ ಇಟ್ಟೆಡೆಗೆ
ನಾದ ತರಂಗ
ತಂಗಾಳಿ ಬೀಸಿದಂಗೆ
ನಿನ್ನಂತರಂಗ……
ಮನದ ದೀಪವಾಗಿ ಸದಾ
ಸುಮ್ಮನೇ ಬೆಳಗುವೆ
ಹೃದಯದ ಬಡಿತವಾಗಿ
ನನ್ನೊಳಗೆ ಉಳಿವೆ……..
ನಾಗರಾಜ ಬಿ.ನಾಯ್ಕ
ಪುಟಾಣಿ ಮಗುವಿನ ಜೊತೆಗೆ ನಗುನಗುತ ಹೆಜ್ಜೆ ಇಟ್ಟಾಗ, ಮನಸ್ಸೊಳಗೆ ಖುಷಿಯ ದಾಂಗುಡಿ ಇಟ್ಟಂತಾಯ್ತು ,ಈ ಸುಂದರ ಕವಿತೆ ಓದಿ…