ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ

ಅವನಿಯೊಳಗಾವನು
ಅವನಗಿಂತ ಹಿರಿಯನು
ಅವನಿ ಅವನದಾಗಿರಲು
ಅವನು ತಾನೆ ಹಿರಿಯನು

ಅವನ ನಗುವೇ
ಅವನಿ ಕಳೆಯು
ಅವನಿ ಚಲುವೇ
ಅವನ ಗೆಲವು

ಅವನ ಮನಸು
ಅವನೇ ಬಲ್ಲ
ಅವನ ಬಲ್ಲದವರು
ಅವನಿಯೊಳಗೇ ಇಲ್ಲಾ

ಅವನಿಗಾಗಿ ಕಚ್ಚಾಡುತಿಹರು
ಅವನಿದ್ದರೂ  ಮರೆತು
ಅವನೇನು ಮಾಡುವನೆಂದು
ಅವನಿಯನೇ ಕೆಡಿಸುತುಹರು

One thought on “ಪ್ರಮೋದ ಜೋಶಿ ಅವರ ಕವಿತೆ ʼಅವನ ಅವನಿʼ

Leave a Reply

Back To Top