ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಅರಳಲಿ

ಪುಟ್ಟ ಉರದ ಮೂಲೆಯಲಿ
ಅಮೃತ   ಹೊನ್ನ ಘಳಿಗೆಯಲ್ಲಿ
ಚಿಮ್ಮಿದ ಪ್ರೇಮ ಒಲವಿನಲ್ಲಿ
ಬೆರೆತು- ಅರೆತ ಪ್ರೀತಿ ಮತ್ತೆ ಅರಳಲಿ..!!೧!!

 ಪ್ರೀತಿಯ ಮಧುರ  ಒಡಲು
 ತ್ಯಾಗ – ಸನ್ಮಾನದ  ಅಳಲು
ರಸಿಕ  ಭಾವದ ‌ ಮಡಿಲು
ಮಾತು ಮೌನದಾಚೆ ಮತ್ತೆ ಅರಳಲಿ…!!೨!!

ಒಲವು  ಸಂಗೀತ   ಕಾನನ
ಮಾಧುರ್ಯ ಕಾಂತಿಯ  ಜನನ…
ನಿರ್ಮಲತೆ ತಿರುಚಿ ನಶಿಸುತ್ತಿರೆ,
ಚಿಮುಕುತ ಮತ್ತೆ ಹಸನಾಗಿ ಅರಳಲಿ….!!೩!!

ಕಪ್ಪು -ಬಿಳಿ ಬಡವ -ಸಿರಿವಂತ
ಉಚ್ಚ -ನೀಚ , ಮೇಲು-ಕೀಳಂತ
ಅಧಿಕಾರ ಹೆಣ್ಣು ಮಣ್ಣುಂತ
ಮರೆತ- ಸೌಜನ್ಯತೆ ಮತ್ತೆ ಅರಳಲಿ….!!೪!!

ಪರಿಶುದ್ಧ ಭಾವದಲ್ಲಿ, ಮರೆಯದೆ
ಗತಕಾಲದ ತ್ಯಾಗ ಬಲಿದಾನ
ಮನಗಟ್ಟಿ, ದ್ವೇಷ ವೈರತ್ವ ಬದಿಗಿಟ್ಟು
ಸೌಹಾರ್ದತೆ ಮತ್ತೆ  ‌ಅರಳಲಿ……..!!೫!!

ಅರಳಲಿ ಮತ್ತೆ  ಘಮಘಮಿಸಿ ಎಲ್ಲೆಲ್ಲಿಯು
ಸುಜ್ಞಾನದ ಹೂವು ಸಂಸ್ಕೃತಿ- ಸಂಸ್ಕಾರ ತುಂಬಿ…
ಮತ್ತೆ ಮತ್ತೆ ಅರಳಲಿ…..

———————————————————-

Leave a Reply

Back To Top