ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಮುಖವಾಡ
ಎತ್ತ ನೋಡಿದರು ನಗುವ ಮುಖಗಳು
ಅವರು ಸಂತೋಷಕ್ಕಾಗಿ ನಗುವರೆ
ನೋವು ಮರೆಸುವುದಕ್ಕೆ ನಗುವರೆ
ತಿಳಿಯದಾಗಿದೆ ಒಂಚೂರು ಎನಗೆ
ನಾನು ಮಾತ್ರ ಮುಖ ಮುಚ್ಚಿ ನಗುವೆ
ನಾಟಕೀಯ ಬದುಕಿನೊಳಗಡೆ
ತಾ ಸಂತೋಷವಾಗಿರುವಂತೆ ನಂಬಿಸಿ
ಪರರ ಕಣ್ಣಿಗೆ ಎಂದಿಗೂ ಗುರಿಯಾಗದಂತೆ
ಅದರೂ ಕಷ್ಟದಲ್ಲಿ ನೊಂದವರು
ಆ ನೋವ ಗುರುತಿಸುವರು ನಗುವಿನೊಳಗೆ
ನಾನು ಆಡುವ ಪ್ರತಿ ಮಾತಿನೊಳಗೆ
ನಾ ಮಾತ್ರ ಅವರು ಕೇಳಿದ ಮಾತಿಗೆ ಮೌನ
ಮಾನ ಮರ್ಯಾದೆಗೆ ಅಂಜಿ
ತನ್ನ ಕಷ್ಟ ನೋವುಗಳ ನನ್ನೊಳಗೆ ಸುಟ್ಟೆ
ನಾ ಯಾರ ಸಹಾಯ ಬಯಸದೆ
ಎಲ್ಲದನ್ನು ಮೆಟ್ಟಿ ನನ್ನ ಕಾಲ ಮೇಲೆ ನಿಂತೆ
ನಂಬಿಕೆಗಿಂತ ಅನುಮಾನವೆ ಮೇಲಿರುವಾಗ
ನಾವು ಮುಖವಾಡ ತೊಟ್ಟು
ಎಲ್ಲರ ಮುಂದೆ ಬದುಕುವುದೆ ಲೇಸು
ನಗು ನಗುತ ಬಳಿ ಬಂದವರ ಸತ್ಕಾರಿಸುತ
———————–
ಸತೀಶ್ ಬಿಳಿಯೂರು