ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಯಾರೆ ನೀನು ಗೆಳತಿ……!
ಯಾರೆ ನೀನು ಗೆಳತಿ
ನೀ ಯಾರು ?
ಎನ್ನ ಮನದಲ್ಲಿ ಕುಳಿತು ನಗುತಿ
ಮನಸಲ್ಲಿ – ಕನಸಲ್ಲಿ ಬಂದೇ ಬರುತಿ
ಪ್ರತಿನಿತ್ಯ ಎನ್ನ ಕಾಡುತಿ
ನನ್ನೀ ಬರಹಕ್ಕೆ- ಬದುಕಿಗೆ
ಬಿಡದೆ ನೀ ಬೆಳಕ ಚೆಲ್ಲುತಿ
ನನ್ನೆದೆಯ ವೀಣೆಯ ನಾ
ನಿನ್ನ ನೆನೆದು ಮೀಟಿದಾಗ
ಪ್ರೇಮ ಕವನ ರಚಿಸುವಲ್ಲಿ
ನೆರವಾಗಿ ಬಂದು ನಿಲ್ಲುತಿ
ನನ್ನ ಬದುಕಲ್ಲಿ
ನೀನಿಲ್ಲದಿದ್ದರೂ
ಅದೇಕೋ ಎನ್ನ ಮನದಲ್ಲಿ
ನೀ ಅರಳುವೆ ಗೆಳತಿ ಪ್ರತೀದಿನ
ಒಂದು ಸುಂದರ ಹೂವಿನಂತೆ
ನಿಜ ಬದುಕಿನಲ್ಲಿ
ನೀ ಬಾರದೆ ಹೋದರೂ
ನನ್ನ ಸೇರದೆ ಹೋದರೂ
ಬೇಡುವೆ ಗೆಳತಿ ನಿನ್ನ ನಾನಿಂದು
ನನ್ನ ಮನಸಲ್ಲಿ – ಕನಸಲ್ಲಿ ಬರುತ್ತಿರು
ನನ್ನೆದೆಯಲ್ಲಿ ಶಾಶ್ವತವಾಗಿ ನೆಲೆಸಿರು
ಕವನಗಳ ರಚಿಸುವಲ್ಲಿ ನೆರವಾಗಿರು
ನನ್ನೀ ಬರಹಕ್ಕೆ
ಸಾಹಿತ್ಯ ಕೃಷಿಗೆ
ಎಂದೆಂದಿಗೂ ನೀ
ಸ್ಫೂರ್ತಿಯ ಸೆಲೆಯಾಗಿರು
ಎಂ. ಬಿ. ಸಂತೋಷ್
ಮೈಸೂರು