ವ್ಯಾಸ ಜೋಶಿ ಅವರ ತನಗಗಳು

ಅಹಂಕಾರ ತೊರೆದು
ಹಗುರವಾಗಿ ಬಿಡು
ಹಗುರವೇ ಸುಲಭ
ಎತ್ತರಕ್ಕೆ ಏರಲು.

ಹಣವಿದ್ದ ಮಾತ್ರಕೆ
ಸಿಗಬಹುದು ವಸ್ತು ,
ಕಷ್ಟ ಮಾರಲಾಗದು
ಶಾಂತಿ ಕೊಳ್ಳಲಾಗದು.

ಎಂದೂ ಭೇಟಿ ಆಗವು
ಅಳುವು ಮತ್ತು ನಗೆ
ಅಕಸ್ಮಾತ್ ಭೇಟಿಯೇ
ಮರೆಯದ ಘಳಿಗೆ.



ಘಾಸಿ ಮಾಡಿದವರ
ತೆಗಳುವ ಬದಲು
ಅವರೆದುರವರ
ವೈರಿಗಳ ಹೊಗಳು.

ಹಸಿವಾದಾಗ ಮಾತ್ರ
ರುಚಿ ಒಂದೊಂದಗಳು
ಹೊಟ್ಟೆಯು ತುಂಬಿರಲು
ಹುಗ್ಗಿಯೂ ಮುಳ್ಳು ಮುಳ್ಳು.

ಸಿಟ್ಟು ದ್ವೇಷ ಅಸೂಯೆ
ಎಲ್ಲವ ಅಳಿಸಲು
ಕೊಟ್ಟಿರುವ ನಮಗೆ
ಒಂದು ಮುಗುಳುನಗೆ

———————————————

Leave a Reply

Back To Top