ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಮನದಾಳ
ಅರಿವಿನ ಪರಿಧಿಯೊಳು
ಮೀಟಿದೆ ಮನದ ವೀಣೆ
ನಾನು ನಿನ್ನವಳೆನ್ನುವ
ಅಭಿಮಾನದ ದನಿಯೊಳು
ಅಲೆಯ ಅಲೆಯಾಗಿ
ಸುಳಿಯು ಆಳವಾಗಿ
ನೆನಪಿನ ಮೆರವಣಿಗೆ
ನಡೆಸಿದೆ ಹೃದಯದಲಿ
ಯಾರು ಇರುವ ಪರಿಯಿಲ್ಲ
ಕಟ್ಟಳೆ ಕಳ್ಳಾಟವಿಲ್ಲ
ನಿಂದೆ ಸಂಗೀತ ನೃತ್ಯ
ಕಾವೇರಿಯ ರಾಯಭಾರವಿಲ್ಲ
ಭಾವದರಮನೆ ಅರಸನಿಗೆ
ಪ್ರೀತಿಯ ಆದರಾತಿಥ್ಯವಿದೆ
ಮನದಾಳದ ಅರಿಕೆಗೆ
ಮನ್ನಣೆ ನೀಡಿ ಸಂತೈಸುವೆಯಾ…?
ಲಲಿತಾ ಕ್ಯಾಸನ್ನವರ