ಕಾವ್ಯ ಸಂಗಾತಿ
ʼಕಡಲ ಅಲೆಗಳುʼ
ಲಲಿತಾ ಕ್ಯಾಸನ್ನವರ
ಮನದ ಮೂಲೆಯಲ್ಲಿ ಪುಟಿದೇಳುವ
ಹಲವು ರಾಗದ ಅಲೆಗಳು
ತುಂತುರು ಹನಿಯ ನೆನಪ ಮೇಲೆ
ಆರ್ಭಟಿಸಿವೆ ಶರಧಿಯಲೆ ತೆರದಿ
ನಿನ್ನ ನಾನು ನನ್ನ ನೀನು ಒಪ್ಪಿ ನಡೆದ
ಆ ಮಧುರ ಕ್ಷಣಗಳು ಮರುಳ ರಾಶಿ
ಮೇಲೆ ಬರೆದ ನುಡಿಗಳು ಮೋಸವೆಂಬ
ದೈತ್ಯ ಅಲೆಗೆ ಛಿದ್ರವಾದ ಕುರುಹುಗಳು
ಕೈ ಮೇಲೆ ಕೈ ಹಾಕಿ ಕಡಲತಟದಿ ಭಾಷೆಯಿತ್ತೆ
ಮೈ ಮರೆತು ನನ್ನದೆಲ್ಲ ನಿನಗೆ ಕೊಟ್ಟೆ
ಪಾಪಿ ಚಿರಾಯು ಎನ್ನುವಂತೆ ತುಂಬಲಿಲ್ಲ ಹೊಟ್ಟೆ ಮತ್ತೆ ಬೇರೆ ಬೆರಳ ಸ್ಪರ್ಷಕ್ಕಾಗಿ ನೀ ಹೊರಟೆ
ಇರಲಿ ಬಿಡಿ ನನ್ನ ವಿಷಯ
ಅದೆ ಮರಳಿನ ಆಲದಲ್ಲೇ ಉಪ್ಪು ನೀರಲ್ಲೇ
ಕೆದಕ ಬೇಡ ನೆನಪ ನೋವ ಚಿತ್ರವ
ರೂಢಿಯಾಗಿದೆ ಕಡಲಲೆಗಳ ಹೊಡೆತ ತಿಂದು
ಅಲೆಗಳ ಆರ್ಭಟದ ಮುಂದೆ
ಗೌಣವಾಗಿದೆ ಹೃದಯ ಬಡಿತ
ಮನಸು ಮರುಳಲ್ಲಿ ಹೂತು ಹೋಗಿದೆ
ಪ್ರೀತಿ ಕುರುಡು ಬರಡು ಎಂದು ಸಾಬೀತು ಮಾಡಿದೆ
Nice mam