ಡಾ.ಸುಜಾತಾ.ಸಿ.ವಿಜಯಪೂರ ಅವರ ಕವಿತೆ-“ಸೊಗಸಿನ ಮನೆ”

ಅದು ಹಾಗೇ ನನ್ನೆದುರಿಗೆ ಅವನು
ಅವನೆದುರಿಗೆ ನಾನು ಸೊಗಸಿನ
ಮನೆ ಹೊಕ್ಕಿರಲು
ಅದೆಂತಹ ಮೊಡಿ ನೊಟ
ಕರೆದಾಗೊಮ್ಮೆ ದೀಡಿರನೇ
ಎದುರು ಬಂದು ನಿಂತಂತಾಗುತ್ತಾ
ಸಾಗುವ ಸಾವಿರದ ಭಾವ ಬಿಂದುಗಳು
ಏ ಏನೆದು ಹೀಗೆಲ್ಲಾ ಮಾಡುವುದು
ಬಾ ಹತ್ತಿರ ಹತ್ತಿರ ಇರುವಾಗಲೇ
ಏ ಇಲ್ಲ ಇಲ್ಲ ನೀ ಕೊಟ್ಟ ಸಿಹಿತಿಂಡಿಯ
ಅಮಲಿನ ನಶೆ ಇನ್ನು ಬಿಡದು ಇನಿಯ
ಕೊಟ್ಟುಬಿಡು ಒಮ್ಮೆ ಭಾವಗಳ ಬಿಂದಿಗೆ
ತುಂಬುವವರೆಗೂ ಅದೇ ಅದೇ
ತಿಡುವ ಮುಂಗುರುಳು ಬೆನ್ನಾವರಿಸಿದಾಗ
ಹದಭರಿತ ನಿನ್ನ ತೊಳತೆಕ್ಕೆಯ ಸುಖ
ಕಸಿವಿಸಿ ಇಗಲೊ ಆಗಲೋ
ದೀಡಿರನೆ ಎದ್ದು ಕುಳಿತ ಆ ದಿನ
ನಿನ್ನ ತಪ್ಪಿಗೆ ನಾ ಶಪಸಿದ್ದು
ನನ್ನದಿಲ್ಲದ ತಪ್ಪಿಗೆ ನೀ ಮರುಗಿದ್ದು
ವಟಗುಟ್ಟುವ ಈ ಪೊನ ರಿಂಗಣಿಸಿದಾಗಲೇ
ಗೊತ್ತಾಗಿದ್ದು ಬರಿ ಬ್ರಮಾಲೋಕ

5 thoughts on “ಡಾ.ಸುಜಾತಾ.ಸಿ.ವಿಜಯಪೂರ ಅವರ ಕವಿತೆ-“ಸೊಗಸಿನ ಮನೆ”

Leave a Reply

Back To Top