ಕಾವ್ಯ ಸಂಗಾತಿ
ಭವ್ಯ ಸುಧಾಕರಜಗಮನೆ
ಜೀವನದ ಬೆಳಕು
ಚಿಗುರೊಡೆದ ಬಸಿರು
ನನ್ನೊಲವಿನ ಉಸಿರು
ಜಗಕೆ ಆಗು ಹಸಿರು
ಅಜರಾಮರವಾಗಲಿ ನಿನ್ನೆಸರು
ನಮ್ಮ ಬಾಳಿಗೆ ಬೆಳಕಾಗಿ ಬಂದ
ಓ ಮುದ್ದು ಕಂದ
ನೀನು ಎಷ್ಟೊಂದು ಅಂದ
ನೀ ಬಲು ಚಂದ
ಒಡಲಲ್ಲಿ ಒದ್ದಾಡದೆ ಒಲಮೆಯೋಕುಳಿಯಾಡಿದೆ
ಮಡಿಲಲ್ಲಿ ಮುದವಾಗಿ ಮಲಗಿದೆ
ನನ್ನ ಜೀವದಜೀವವಾಗಿ ಜೀವನದಿಯಾದೆ
ನೀ ನನ್ನೊಡನೆ ಪುಟ್ಟ ಗೆಳತಿಯಾದೆ
ನೀನು ರಗಳೆ ಮಾಡದೆ
ತೊಂದ್ರೆ ಕೊಡದೆ ಖುಷಿ ಕೊಟ್ಟಿರುವೆ
ಸಾಂತ್ವನದ ಹೂಮಳೆಗರೆದ ದೇವತೆಯಾದೆ
ನೀ ನಮಗೆ ಎಂದೆಂದಿಗೂ ಪುಣ್ಯದ ಫಲವೇ
ಮುದ್ದು ಮಗಳೇ
ನಮ್ಮ ಮನೆ ಮನದ ಬೆಳದಿಂಗಳೆ
ಲೋಕಕಲ್ಯಾಣ ಮಾಡುತಲೆ
ನಿನ್ನಯ ಜನ್ಮ ಸಾರ್ಥಕ ಮಾಡೆ
ಭವ್ಯ ಸುಧಾಕರಜಗಮನೆ