ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ.
 ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ.
 ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ.
 ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ, ನಮೋ ನಮೋ

 ಮಹಾದೇವಿ ಅಕ್ಕನವರ ಈ ಒಂದು ವಚನ ನಮಗೆ ಲಿಂಗ ದ ಮಹತ್ವದ  ಬಗ್ಗೆ ತಿಳಿಯಪಡಿಸುತ್ತದೆ.
ಲಿಂಗದ ಭಕ್ತಿ, ಚೈತನ್ಯ ಭಾವ, ಎದ್ದು ಕಾಣುವ ಅಧ್ಯಾತ್ಮದ ಒಲವು ಮೂಡಿ ಬಂದಿದೆ .

ನರನಂತಿದ್ದವರು ಇಷ್ಟಲಿಂಗವ ಸೋಂಕಲೊಡನೆ ಹರಸ್ವರೂಪರಾಗುತ್ತಾರೆ. ಒಬ್ಬ ದರೋಡೆಯನ್ನು ಮಾಡುತ್ತಿದ್ದ,ತನ್ನ ಕೆಟ್ಟ ಕೆಲಸವನ್ನು ತೊರೆದು, ಸಾಮಾನ್ಯ ಭವಿಯಂತಿದ್ದವರು ಭಕ್ತರಾಗುತ್ತಾರೆ. ಇಷ್ಟಲಿಂಗವ ಧರಿಸಿದ ಮೇಲೆ ನಿಜವಾದ ಜನನವೆಂಬಂತೆ
ಇಷ್ಟಲಿಂಗವು ಮೈಗೆ ಸೋಂಕಿದರೆ ಸಾಕು ನಾವೇ, ದಿವ್ಯ ಜ್ಞಾನ ಪಡೆದು ಮಾನವ ಮಹದೇವನಾಗುತ್ತಾನೆ .ಅಂದರೆ ಪರಮಾತ್ಮ ಸ್ವರೂಪ ಆಗುವರು .ದೇವರಂತೆ ಆಗುವರು .ಕೊನೆಗೆ ದೇವರೇ ಆಗಿ ಬಿಡುತ್ತಾರೆ .ಮನದಲ್ಲಿ ಶಾಂತಿ ಉಂಟಾಗುತ್ತದೆ .ಮನದಲ್ಲಿರುವ ದ್ವೇಷ ಭಾವನೆಯು ಅಳಿದು ಹೋಗುತ್ತದೆ .ಮನದ ಚಂಚಲತೆ ದೂರಾಗಿ ಹೋಗುತ್ತದೆ.

ಲಿಂಗಕ್ಕೆ ಒಂದು ಶಕ್ತಿ ಇದೆ. ಚೈತನ್ಯ ಇದೆ ವೈಜ್ಞಾನಿಕ ಕುರುಹೇ ಈ ಲಿಂಗ. ಅದು ನನಗೆ ಹರನಾಗಿ ಬಂದಿದೆ .ಅಲ್ಪ ಮಾನವನಾಗಿದ್ದ ನನ್ನನ್ನು ದೇವ ಮಾನವಳಾಗಿ ಮಾಡಿದ್ದು ಈ ಲಿಂಗ.
ನನ್ನ ಮಾನವ ಜನ್ಮ ಕಳೆದು ಹೋಗಿ ಹರ ಜನ್ಮವ ಪಡೆದು ಬಂದೆ. ಓ ಗುರುವೇ ಚೆನ್ನಮಲ್ಲಿಕಾರ್ಜುನಾ .

ಈ ಸಂಸಾರ ಎನ್ನುವ ಭವ ಬಂಧನದಿಂದ ನನ್ನನ್ನು ಪಾರು ಮಾಡಿದ ಓ ಗುರುವೇ ನಮೋ ನಮೋ ಎನ್ನುವೆ .ಕಷ್ಟದಿಂದ ಕಡಿದಾಡುವ ಈ ದೇಹದ ಆರು ವೈರಿಗಳಿಂದ ನನ್ನನ್ನು ಪಾರು ಮಾಡಿ ಪರಮ ಶಾಂತಿಯನ್ನು ದೊರಕಿಸಿಕೊಟ್ಟ ಓ ಗುರುವೇ ನಮೋ ಎನ್ನುವೆ ನಿಮಗೆ .

ಭವಿ ಎಂದೆನ್ನೆಸದೇ ನಿಮ್ಮ ಭಕ್ತಳಾಗಿಸಿದೆ .
ದೃಢ ಚಿತ್ತದಿಂದ ಪೂಜಿಪೆ ಗುರುದೇವ. ಎನಗೆ ಗುರು ಮಾರ್ಗ ತೋರಿದೆ .ನನ್ನ ಅರಿವಿಗೆ ಅರುವಾಗಿ ನಿಂತೆ .
ಭಕ್ತ ಎಂದೆನಿಸಿದ ನಿಮ್ಮ ಪಾದಕ್ಕೆ ನನ್ನ ವಂದನೆಗಳು .
ಓ ಚನ್ನಮಲ್ಲಿಕಾರ್ಜುನ ಲಿಂಗ ವಾಗಿ ನನ್ನ ಕೈ ವಶದಲ್ಲಿ ಕೊಟ್ಟ ಓ ಗುರುವೇ ಆರಾಧಿಸುವೆ .

ಅಕ್ಕ ಮಹಾದೇವಿಯವರು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಅಪಾರವಾದ ಲೌಕಿಕ ಜ್ಞಾನವನ್ನು ಹೊಂದಿದ ಮೊದಲ ಕವಯತ್ರಿಯವರು .ವಲ್ಲದ ಗಂಡನನ್ನು ಮದುವೆಯಾಗಿ ಲೌಕಿಕ ಬಂಧನದಿಂದ ಮುಕ್ತಿ ಬಯಸಿ ,ಅಧ್ಯಾತ್ಮಿಕ ಒಲವಿನತ್ತ ತನ್ನ ಮನ ಸೆಳೆದುಕೊಂಡು ಹೋಗುವ ಅರುವಿನ ಜ್ಞಾನವೇ ತನಗೆ ಗುರುವಾಗಿ ನಿಲ್ಲುವ, ಒಂದು ಅನುಭಾವದ ವಚನದ ನುಡಿ ಮಾತುಗಳನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ .

 ನರ ಜನ್ಮವ ತೊಡೆದು ಹರ ಜನ್ಮವ ಮಾಡಿದ ಗುರುವೇ ನಮೋ

ಅಕ್ಕಮಹಾದೇವಿಯವರು ತನ್ನ ಲೌಕಿಕ ಗಂಡ ಕೌಶಿಕನನ್ನು ದಿಕ್ಕರಿಸಿ ,ಕದಡಿಯಿಂದ ಕಲ್ಯಾಣಕ್ಕೆ ಬರುತ್ತಾರೆ .ವಿಶ್ವಗುರು ಬಸವಣ್ಣನವರನ್ನು ಕಾಣುವ ನೋಡುವ ಅವರ ಮಾತುಗಳನ್ನು ಆಲಿಸುವ ಉತ್ಕೃಷ್ಟ ವಿಚಾರಗಳನ್ನು ಇಟ್ಟುಕೊಂಡು ಅನುಭವ ಮಂಟಪದ ದಿವ್ಯ ಸ್ಥಾನವನ್ನು ಅಲಂಕರಿಸಿದ ದಿವ್ಯ ಜ್ಞಾನಿ ಅಲ್ಲಮಪ್ರಭುಗಳಿಗೆ ನಮಸ್ಕಾರಿಸಿ ,ಅವರು ಕೇಳುವ ಎಲ್ಲ ಪ್ರಶ್ನೆಗಳನ್ನು ಗಟ್ಟಿಯಾಗಿ ಉತ್ತರಿಸುತ್ತಾರೆ.
ಕೊನೆಗೆ ಅಲ್ಲಮಪ್ರಭುಗಳಿಂದ ಮೆಚ್ಚುಗೆ ಪಡೆದು ,ತನ್ನ ಮನದ ಇಚ್ಚೆಯಂತೆ ,ಅಂಗೈಯಲ್ಲಿ ಲಿಂಗವನ್ನು ಧರಿಸಿದ ಅಕ್ಕ ಪ್ರಕೃತಿಯ ಸುಂದರ ಮಡಿಲಲ್ಲಿ ತಮ್ಮ ಅರಿವಿನ ಗುರುಗಳನ್ನು ನೆನೆದು ನುಡಿಯುವ ಮಾತುಗಳು ನಮ್ಮೆಲ್ಲರ ಮನಗಳನ್ನು ಪರಿವರ್ತಿಸುವ ನುಡಿಗಳಾಗಿವೆ .

ಈ ನುಡಿಗಳು ಅಕ್ಕನವರ ಬದುಕಿನ ತಿರುಳಿನ ಮಾತುಗಳು .
ನರ ಜನ್ಮದವರಿಗೆ ಆಸೆಗೆ ಮಿತಿಯೇ ಇಲ್ಲ .ಒಂದು ಆಸೆ ಪೂರೈಸಿದ ಮೇಲೆ ಮತ್ತೊಂದು ,ಮಗದೊಂದು ಎಂದು ಊರೂರ ಸುತ್ತುತ್ತ, ಚಡಪಡಿಸುತ್ತ, ಗೋಗರೆಯುತ್ತ ,ಮನದಲ್ಲಿ ತೃಪ್ತ ಭಾವವನ್ನು ತಾಳದೇ ಇರುವ ಮನಕ್ಕೆ ಅಕ್ಕನವರೂ ಕೂಡಾ ಓ ಗುರುದೇವಾ ,ನನ್ನ ಮನವು ಈ ಮಾನವ ಜನ್ಮದಲ್ಲಿ ಹುಟ್ಟಿದ್ದೀರ ಬಹುದು ,ಈ ಆಸೆ ಆಕಾಂಕ್ಷೆ ಯಿಂದ ನನ್ನ ಮನ ಹಂಬಲಿಸಿ ಬಳಲಿದ್ದೀರಬಹುದು .ಇಂಥಹ ನರ ಜನ್ಮದಿಂದ ನನ್ನನ್ನು ಹರಜನ್ಮವನ್ನು ಅಂದರೆ, ದೇವರಾಗುವ ಪರಮ ಪವಿತ್ರವಾದ ಹರಜನ್ಮವ ನೀಡಿ ನನ್ನನ್ನು ಪಾವನಗೊಳಿಸಿದ ,ಓ ಗುರುವೇ ನಿಮಗೆ ನಮೋ ನಮೋ ಎನ್ನುವೆ .

 ಭವ ಬಂಧನದಿಂದ ಬಿಡಿಸಿ ಪರಮ ಸುಖವ ತೋರಿದ ಗುರುವೇ ನಮೋ

ಆಸೆಯ ಕೆಸರಿನಲ್ಲಿ ಬಿದ್ದು ಹೊರಳಾಡುವ ನನ್ನ ಮನ, ಬಂಧನದಿಂದ ಬಿಡಿಸಿಕೊಳ್ಳಲಾರದಂತೆ ಆಗಿತ್ತು. ಹೇ ಗುರುದೇವ ಈಗ ನಿಮ್ಮ ದಯೆಯಿಂದ ನನಗೆ ಪರಮ ಸುಖ ವನ್ನು ಪಡೆದ ಆನಂದ ವಾಗಿದೆ .

 ಭವಿಯೆಂಬುದ ತೊಡೆದು ಭಕ್ತೆ ಎಂದೆಣಿಸಿದ ಗುರುವೆ ನಮೋ

ನಾನು ಈ ಹುಟ್ಟು ಮತ್ತು ಸಾವುಗಳ ಕಾಲ ಚಕ್ರದಲ್ಲಿ ನನ್ನ ಮನ ಸೋತುಹೋಗಿದೆ .


ಈ ಸಂಸಾರ ಎನ್ನುಬಂಧನದಲ್ಲಿ ನಾನು ನಿನ್ನನ್ನು ಮರೆತುಕುಂತೆ.ಲಿಂಗದ ಮಹಿಮೆಯನ್ನು ಅರಿಯದೇ ಹೋದೆ.ಸಂಸಾರ ಎನ್ನುವ ಬಂಧನವನ್ನು ಕಿತ್ತು ಬಂದು ಈಗ ನಾನು ನಿನ್ನ ಭಕ್ತಳಾಗಲು ಅರ್ಹಳಾದೆ.
ಸಂಸಾರದ ಬಂಧನದಲ್ಲಿ ಇದ್ದರೇನು ? ಭಕ್ತರಿಗೆ ಲಿಂಗ ಜ್ಞಾನದ ಅರಿವು ಇರಬೇಕು .ಗುರುಪಥವೇ ಸನ್ಮಂಗಳಕೆ ದಾರಿ .ಈ ಸಂಸಾರದ ಏಳು ಬೀಳುಗಳ, ಆಸೆ ಆಮಿಷಗಳಲ್ಲಿ ಆರು ವೈರಿಗಳು ವಿರುದ್ಧವಾಗಿ ನಿಂತು ಬಿಟ್ಟರು. ಇದರಿಂದ ನನ್ನಲ್ಲಿರುವ ಭಕ್ತಿಯು ಕುಂದು ಹೋಯಿತು .ಮನದ ಆರು ವೈರಿಗಳನ್ನು ಮೆಟ್ಟಿ ನಡೆದು ಈಗ ನಿನ್ನ ಭಕ್ತಳಾಗಿರುವೆ ಗುರುದೇವ .ನಮೋ ಎನ್ನುವೆ. ನಿಮ್ಮ ಪಾದ ಕಮಲಕ್ಕೆ ಅನಂತ ಭಕ್ತಿಯ ಶರಣು ಗುರುವರ್ಯ. ಎನ್ನುವರು ಅಕ್ಕ.

 ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೇ ನಮೋ ,ನಮೋ

ವಿಶ್ವ ಗುರು ಬಸವಣ್ಣನವರು ಒಂದು ಅರಿವಿನ ಕುರುಹು ,ಒಂದು ವೈಜ್ಞಾನಿಕ ಕುರುಹು ಆಗಿ .ಎಕದೇವೋಪಾಸನೆಗಾಗಿ .ನಮ್ಮ ನಮ್ಮ ಕರಸ್ಥಲದಲ್ಲಿ ಒಂದು ಲಿಂಗವನ್ನು ಕೊಟ್ಟರು .

ಅದನ್ನೇ ಅಕ್ಕನವರು ಓ ಲಿಂಗವೇ, ಓ ಚೆನ್ನಮಲ್ಲಿಕಾರ್ಜುನನೇ, ನೀನು ಇಂದು ನನ್ನ ಕೈವಶದಲ್ಲಿ ಬಂದು ಕುಳಿತೆ. ಹೀಗೆ ಅರಿವಿನ ಕುರುವು ದಿವ್ಯವಾದ, ಜ್ಞಾನದ ಸಂಕೇತವಾದ ,  ಚೈತನ್ಯದ ಸಂಕೇತ ವಾದ ಲಿಂಗದ ರೂಪದಲ್ಲಿ  ಚೆನ್ನಮಲ್ಲಿಕಾರ್ಜುನನೇ ಬಂದಿರುವನು ಎಂದುಅಕ್ಕನವರ ಭಾವ .



One thought on “

Leave a Reply

Back To Top