ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಮತ್ತೇರಿದಾಗಿನ ಮಾತುಗಳು
೧) ಗುರಿಯೆಡೆಗೆ ಬಾಣ
ಸಾಗಲು ಬಿಲ್ಲು ಬಾಗಬೇಕು
ಸುಖದೆಡೆಗೆ ಬದುಕು
ಸಾಗಲು ದೇಹ ಬಾಗಬೇಕು
೨) ಬೆಳ್ಳಿ ಬಂಗಾರ ವಜ್ರ ವೈಡೂರ್ಯ ರಂಗುರಂಗಿನ ಬಟ್ಟೆ
ಥಳುಕು ಬಳುಕಿನ ಬದುಕಾದರೂ..
ಚಟ್ಟದ ಮೇಲೆ ಬಟ್ಟೆ ಬೇಕಿಲ್ಲ
೩) ಮರದಿಂದುರಿದ
ಎಲೆಗೆ ಮಣ್ಣೇ ಆಸರೆ
ಎನು ಮಾಡಲಿ ಹೇಳು
ಚಳಿ ಜೋರಾಗಿದೆ
ನಾನಿನ್ನ ಕೈಸೆರೆ
೪) ಮೊದಲ ಮುತ್ತು
ಮತ್ತೇ ನೆನಪಾಗಿದೆ
ಒಲವು ನೋವಲ್ಲ
ನೋವೇಇಲ್ಲದ ಒಲವಿಲ್ಲ
೫) ನೀ ಕೊಟ್ಟಿದ್ದನ್ನೇಲ್ಲಾ
ಸ್ವೀಕರಿದ್ದೇನೆ ದೇವರೇ
ಬೆತ್ತಲೆಯ ಕತ್ತಲಲಿ
ನಾ ಅತ್ತು ಹಗುರಾಗಬೇಕು
ನೀ ಅಲ್ಲಿಗೂ ಬರಬೇಡ
೬) ಹೂ ಬಾಡದಿದ್ದರೆ ಎಷ್ಟು ಚೆನ್ನ ಹರೆಯ ಮಾಗದಿದ್ದರೆ ಎನು ಚೆನ್ನ
ನೀ ಹರಿದು ಬಿಡಬೇಕಿತ್ತು ಮಾತು ಒಲವಾದರೂ ಒಲಿಯುತಿತ್ತು
೭) ಗೋರಿಯ ಮೇಲೆ ಗುಲಾಬಿ ಇಟ್ಟು ಗುರುತಿಸಬೇಡ ನನ್ನ
ಗೋರಿಯೊಳಗಾದರೂ ನೆಮ್ಮದಿ ಹುಡುಕುವೆ ಚಿನ್ನ
೮) ನಿನ್ನ ಕುಡಿನೋಟ ಸಾಕೆನಗೆ
ನಶೆಯಾಗಲು !
ಸಾಕಿ ಮಾತೇ ಕೇಳಲಿಲ್ಲ ಗ್ಲಾಸು ಕೊಟ್ಟೇಬಿಟ್ಟ
ಮುಂದಿನದು ನಿನ್ನ ಚಿತ್ತ
ಇಮಾಮ್ ಮದ್ಗಾರ