ಕಾವ್ಯ ಸಂಗಾತಿ
ಸುಧಾ ಪಾಟೀಲ
ಹನಿ ಹನಿ ಸಿಂಚನ
ನೆನಪಾಗುತ್ತಿತ್ತು
ಮನದ ಮೂಲೆಯಲ್ಲಿ
ಯಾವುದೋ ಗುಂಗಿನಲಿ
ಅಂಧಕಾರದ ಮಡುವಿನ
ಹೊಳಪಿನ ನಕ್ಷತ್ರದಲಿ
ಭಾವ ಬಂಧುರಗಳ
ಸೋಜಿಗದಲಿ
ಹೊಳಪಿಟ್ಟು ಕಾಯ್ವ
ಚೆಲ್ವ ಚಂದಿರನಲಿ
ಸರಿಗಮದ ನಿನಾದದಲಿ
ಮರೆಯಲಾರದ ಸಾಲುಗಳ
ಶಬ್ದದ ಮೋಡಿಯಲಿ
ಪಕ್ಷಿಯ ಮಧುರ ಕಂಠದಲಿ
ಬೆಳಕು ಹೊತ್ತ ದೀಪಗಳ
ಪ್ರಕಾಶಮಾನದಲಿ
ಭರವಸೆಯ ಉಜ್ವಲ
ಭವಿಷ್ಯದಲಿ
ಹನಿ ಹನಿ ಸಿಂಚನ
ಇಣುಕಿ ಹಾಕುತ್ತಿತ್ತು
ಎಡೆಬಿಡದೆ
ಸುಧಾ ಪಾಟೀಲ
ಸುಂದರ ಭಾವ ಮ್ಯಾಡಂ ಧನ್ಯವಾದಗಳು