ಡಾ.ಉಮೇಶ್ ಟಿ.ಪಿ. ಅವರ ಕಥೆ”ಬದುಕಿನ ಹೊಸಗೀತೆ!”

ಬಂತಿದೊ ಸಂಕ್ರಾಂತಿ ನಮಗೆ ನವಚೇತನ ತುಂಬುತಲಿ;
ತಂತಿದೋ ಸಂಭ್ರಮವ ನಮ್ಮೆಲ್ಲರ ತನು ಮನಗಳಲ್ಲಿ;
ನೊಂದಿರುವ ಭಾವನೆಗಳಿಗೆ ಸಾಂತ್ವನವ ಹೇಳುತಲಿ;
ಮುಂಬರುವ ದಿನಗಳಿಗೆ ಹೊಸ ಬೆಳಕನ್ನು ಚೆಲ್ಲುತಲಿ;

ನೇಸರನು ತನ್ನ ನವ ಪಥದಿ ಹೊಸ ದಿಕ್ಕಿಗೆ ಚಲಿಸುವನು;
ಕವಿದಿರುವ ಇರುಳ ಇಬ್ಬನಿಯ ಮಬ್ಬನ್ನು ಸರಿಸುವನು;
ನವಿರಾದ ಚೈತನ್ಯವ ಹಸಿರ ಭೂರಮೆಗೆ ಹರಿಸುವನು;
ಸವಿಯಾದ ದಿನಗಳನ್ನು ನಮ್ಮ ಬಾಳಿನಲ್ಲಿ ಹರಸುವನು!

ಎಳ್ಳು ಬೆಲ್ಲವನು ಬೆರೆಸಿ ಹಂಚಿ ನಾವೆಲ್ಲ ಸವಿಯೋಣ;
ಒಳ್ಳೆಯ ಮಾತುಗಳನ್ನು ಬದುಕಿಡೀ ನುಡಿಯೋಣ;
ಬಳ್ಳಿಗಳ ತೆರನಾಗಿ ಸಂಬಂಧಗಳ ಬಂಧ ಬೆಸೆಯೋಣ;
ಒಳ್ಳೆಯದರೆಡೆಗೆ ಬದುಕಿನ ಬಂಡಿಯ ಎಳೆಯೋಣ!

ನಮ್ಮಗಳ ನಡುವಿರುವ ಭೇದಭಾವಗಳ ಮರೆಯೋಣ;
ನಮ್ಮಗಳ ಒಳಗಿನ ದ್ವೇಷಾಸೂಯೆಗಳ ತೊರೆಯೋಣ;
ನಾನು ನನ್ನದೆನ್ನುವ ಕಡು ಸ್ವಾರ್ಥಗಳ ತ್ಯಜಿಸೋಣ;
ನಾವು ಒಂದೆನ್ನುವ ಬದುಕಿಗೆ ಹೊಸಗೀತೆ ಬರೆಯೋಣ!
——————————————

Leave a Reply

Back To Top