ಕಾವ್ಯ ಸಂಗಾತಿ
ಲೋಕರತ್ನಸುತೆ
ಸಂಕ್ರಾಂತಿಯಹಾಯ್ಕುಗಳು
ಸಂಕ್ರಾಂತಿ ಹಬ್ಬ
ವಾರ್ಷಿಕ ಸೂರ್ಯ ಪಥ
ಸಂಚಲನವು
ಹೊತ್ತು ತರುತ್ತೆ
ಸುಗ್ಗಿ ಸಂಭ್ರಮವನು
ಮನೆ ಮನದಿ
ಎಳ್ಳು ಬೆಲ್ಲದಿ
ಪ್ರೀತಿ ಸ್ನೇಹ ಸೇರಿಸಿ
ನಾವು ಹಂಚೋಣ
ಭೂಮಿತಾಯಿಯ
ಗೋವನು ಸಿಂಗರಿಸಿ
ಮೆರೆಸೋಣ
ಅನ್ನದಾತಗೆ
ಸದಾ ಬೆಂಬಲವಾಗಿ
ನಮಿಸೋಣವೆ
ದ್ವೇಷ ದಹಿಸಿ
ಸಹಬಾಳ್ವೆಯಲಿಯೇ
ಹಬ್ಬ ಮಾಡೋಣ
ಸಂಕ್ರಮಣವು
ಎಲ್ಲೆಡೆ ನವೋಲ್ಲಾಸ
ಪಸರಿಸಲಿ
ಲೋಕರತ್ನಸುತೆ