ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಸಂಕ್ರಾಂತಿಯ ಸಂಭ್ರಮ
ಸಂಕ್ರಾಂತಿಯ ಸಂಭ್ರಮ ಎಲ್ಲೆಲ್ಲೂ ಹರಡಲಿ
ಹೊಸ ಹರುಷ ಹೊಸ ವರುಷ ದಿನವು ದಿನವು ಬರಲಿ!
ಅವರೆ, ಕೊಬ್ಬು, ಗೆಣಸು, ಸವಿಯೋಣ ಬನ್ನಿ
ಖುಷಿಯಲಿ ನಗುವಿನಲಿ ಕೂಡಿ ಬಾಳೋಣ ಎನ್ನಿ!!
ಜೋಡೆತ್ತುಗಳ ಜೋಡಿಯು ನೋಡಲು ಚಂದವು
ಕಣ್ಣಿಗೆ ಆನಂದ ಮನೆಯವರ ಮನಸೆಲ್ಲ ಉಲ್ಲಾಸವು!
ತಳಿರಿನ ತೋರಣ ಎಲ್ಲೆಲ್ಲೂ ಸಡಗರದ ಸಂಭ್ರಮ
ಮನೆಯ ಮುಂದೆ ರಂಗು ರಂಗಿನ ಸಮಗಮ!!
ಹೆಣ್ಣು ಗಂಡು ಸೇರಿ ಕೂಡಿ ಮಾಡುವ ಹಬ್ಬವಿದು
ಮರೆಯಲಾಗದ ಸಂತಸದ ಸವಿ ಜೇನಿನ ಗೂಡಿದು!
ಮನೆಯಲ್ಲಿ ಎರಡು ಮುದ್ದು ಜೋಡಿಯ ಎತ್ತುಗಳು
ಅಲಂಕಾರದಲ್ಲಿ ಕುಣಿಯುತಿತ್ತು ಮುತ್ತಿನಂತ ಮಕ್ಕಳು!!
ಸಂಕ್ರಾಂತಿ ದಿನದಂದು ಕಹಿ ಮರೆತು ಬೆಲ್ಲದ ಸಿಹಿ ಉಂಡಿರಿ
ಹಗಲು ಕಳೆದು ರಾತ್ರಿಯಲ್ಲಿ ಬರಾಟೆಗಳ ಸುತ್ತಿರಿ!
ಎತ್ತುಗಳ ಸಿಂಗಾರ ಗೊಳಿಸಿ ಊರೆಲ್ಲ ಸುತ್ತಿಸಿರಿ
ಅವುಗಳ ಆಶೀರ್ವಾದ ಮನೆ ಮಂದಿಯರೆಲ್ಲ ಪಡೆಯಿರಿ!!
ಜೋಡೆತ್ತುಗಳ ಕುಣಿತ ಗಲ್ಲು ಗಲ್ಲಿನ ಸದ್ದು ಕಾಲು ಗೆಜ್ಜೆ
ಅವು ನಡೆಯುತ್ತ ಬರುತ್ತಿದ್ದರೆ ನಾ ಕಂಡೆ ಲಕ್ಷೀಯ ಹೆಜ್ಜೆ!
ಮನೆಯಲ್ಲಿ ಅಸುಗಳಿರಲು ನಮಗೆಲ್ಲ ಅದೇ ಸಿರಿ
ಆ ಮನೆ ಪ್ರೇಮ ವಾಸ್ತಲ್ಯದ ಆನಂದ ಮಯ ಗಿರಿ!!
ಕಾವ್ಯ ಪ್ರಸಾದ್