ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
ಸೊಗಸು ಚಿತ್ರಣ
ಭೂಮಂಡಲದ ಅವತರಣ
ಬರುವುದಕ್ಕೆ ಕಾರಣ
ಎಲ್ಲದರ ಔತಣ
ನಭದ ಅನಾವರಣ
ಎಂಥ ಸುಂದರ ಪರಿಸರ
ಸಾಗಿರುವ ಸಾಗರ
ನೋಡಿದಲೆಲ್ಲ ನೀರು
ಪೃಥ್ವಿಯ ಪನ್ನೀರು
ಗುಡ್ಡಗಾಡು ಚೆಲುವ ಬೀಡು
ಮರಗಿಡಗಳ ಕಾಡು
ಹಸಿರ ಚಿಗುರು ಸುತ್ತಲು
ಮುಗಿಲೆತ್ತರದಲೂ
ನೀಲಿ ಬಣ್ಣದೋಕುಳಿ
ತಂಪಾದ ಗಾಳಿ
ಪರಿಸರವೇ ರಮ್ಯ
ಸುಂದರ ಅಭಯಾರಣ್ಯ
ಸೊಗಸಿದೆ ಹರುಷವಿದೆ
ಪ್ರಕೃತಿಯ ಮಡಿಲಲ್ಲಿ
ಚಂದದ ನೋಟದಲ್ಲಿ
ತಿಳಿ ನೀಲಿ ಆಗಸದಲ್ಲಿ
ಗಾಯತ್ರಿ ಎಸ್ ಕೆ