ಲೇಖನ ಸಂಗಾತಿ
“ಕನ್ಯಾಕುಮಾರಿಯ ಕನಸು ನನಸಾಗಿದ್ದು”
ಶಾರದಜೈರಾಂ.ಬಿ ಚಿತ್ರದುರ್ಗ
ಇಂದು ಸ್ವಾಮಿ ವಿವೇಕಾನಂದರ ಗೌರವಾರ್ಥ ರಾಷ್ಟ್ರೀಯ ಯುವ ದಿನ.ಬಾಲ್ಯದಿಂದಲೂ ನನಗೆ ಸುಪ್ತ ಚೇತನ ಸ್ವಾಮಿ ವಿವೇಕಾನಂದರರು ಅವರ ಭಾವಚಿತ್ರ ನೋಡುವಾಗಲೆಲ್ಲಾ ಎಂಥಾ ತೇಜೋಪುಂಜ ಕಂಗಳು, ಗಾಂಭೀರ್ಯ ವದನ, ಸದೃಡ ಶರೀರ ನೋಡುತ್ತಿದ್ದರೆ ನೋಡುವ ಭಾವ ತೀರದು.ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಶಾಲೆಯಲ್ಲಿ ಏರ್ಪಡಿಸಿದ್ದ ಭಾಷಣದಲ್ಲಿ ನನಗೆ ಪ್ರಥಮ ಬಹುಮಾನ ಲಭಿಸಿದ್ದು ಸ್ಮರಣೀಯ ಕ್ಷಣ ಆ ದಿನ ನೆನೆದರೆ ಇಂದಿಗೂ ರೋಮಾಂಚನ ತರುವ ಘಳಿಗೆ.
ಸ್ವಾಮಿ ವಿವೇಕಾನಂದರು ಯುವಜನಾಂಗಕ್ಕೆ ಆದರ್ಶಪ್ರಾಯರು,ಅವರ ಉದಾತ್ತ ವಿಚಾರಗಳು, ಧ್ಯೇಯೋದ್ದೇಶಗಳು ಎಂಥಾವರನ್ನಾದರೂ ಬಡಿದೆಬ್ಬಿಸಿ ಬದುಕಿಗೆ ಸ್ಪೂರ್ತಿ ತುಂಬುವಂತವುಗಳು ಕೆಲವೊಂದನ್ನು ಹಂಚಿಕೊಳ್ಳುವೆ.
ಮೊದಲನೆಯದಾಗಿ ನೀವು ಏನಾಗಬೇಕೆಂದು ಬಯಸುವಿರೋ ಅದರ ಮೇಲೆ ಗಮನವಿರಲಿ, ನೀವು ನಿಮ್ಮನ್ನು ದುರ್ಬಲರೆಂದು ಭಾವಿಸಿದರೆ ನೀವು ದುರ್ಬಲರಾಗುತ್ತೀರಿ, ನೀವು ನಿಮ್ಮನ್ನು ಬಲಶಾಲಿ ಎಂದು ಭಾವಿಸಿದರೆ ನೀವು ದೇಶವನ್ನೇ ಆಳಬಹುದು.ನಿಮ್ಮನ್ನು ದುರ್ಬಲಗೊಳಿಸುವ ಸಂಗತಿ ವಿಷ ಎಂದು ತಿರಸ್ಕರಿಸಿ.
ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವೆಡೆ ಗುರಿ ತಲುಪುವವರೆಗೂ ಏಕಾಗ್ರತೆ ಪರಿಶ್ರಮ,ಅವಿರತ ಪ್ರಯತ್ನ ಬೇಡುತ್ತದೆ ಎಂಬ ತಾತ್ಪರ್ಯವಿದೆ.
ಯಾವುದೇ ಕೆಲಸವಾಗಲಿ ಅಪೇಕ್ಷೆ ಇಲ್ಲದೇ ಮಾಡು ಕೊನೆಯಲ್ಲಿ ಅನೀರಿಕ್ಷಿತ ಫಲಿತಾಂಶದ ಯಶಸ್ಸು ನಿಮ್ಮದಾಗುತ್ತದೆ.
ಒಂದು ವಿಷಯವನ್ನು ತೆಗೆದುಕೊಳ್ಳಿ ಆ ಒಂದು ವಿಷಯವನ್ನೇ ನಿಮ್ಮ ಜೀವನವನ್ನಾಗಿ ಮಾಡಿಕೊಳ್ಳಿ,ಅದರ ಕನಸು ಕಾಣಿರಿ ಅದರ ಬಗ್ಗೆ ಯೋಚಿಸಿ ಆ ಕಲ್ಪನೆಯ ಮೇಲೆ ಜೀವಿಸಿ ಮೆದುಳು,ದೇಹ, ಸ್ನಾಯುಗಳು, ನರಗಳು, ನಿಮ್ಮ ದೇಹದ ಪ್ರತಿಯೊಂದು ಭಾಗವೂ ಆ ಕಲ್ಪನೆಯಿಂದ ತುಂಬಿರಲಿ ಮತ್ತು ಇತರೆಡೆ ಗಮನ ಹರಿಸಬೇಡಿ ಆಗ ನೋಡಿ ಯಶಸ್ಸಿನ ದಾರಿದೀಪ ನಿಮ್ಮ ಸಮೀಪವಿರುತ್ತದೆ ವಿಜೇತರಾಗುವಿರಿ.
ಸ್ವಾಮಿ ವಿವೇಕಾನಂದರ ವಿವೇಕವಾಣಿ ಎಂದೆ ಜನಜನಿತ ಕೆಲವೊಂದು ಆಯ್ದ ವಿವೇಕವಾಣಿಗಳು ಹೀಗಿವೆ.
ನಮ್ಮ ಭವಿಷ್ಯವನ್ನು ನಿರ್ಧರಿಸುವವರು ನಾವೇ ನಮ್ಮಹಸ್ತರೇಖೆಗಳಲ್ಲ,ಬೇರೆಯವರಲ್ಲಿ ಅದಕ್ಕಾಗಿ ಬೇರೆಯವರನ್ನು ದೂರದೇ ನಿನ್ನ ನೀನು ನಂಬಿ ನಡೆ.
ಸಾಧ್ಯವೇ ಇಲ್ಲ ಎಂದರೆ ಏನನ್ನೂ ಸಾಧಿಸಲಾಗದು, ಪ್ರಯತ್ನದಿಂದ ನಷ್ಟವೇನಿದೆ ಗೆದ್ದರೆ ಸಂತೋಷ ಸಿಗುವುದು,ಸೋತರೆ ಅನುಭವ ಖಚಿತ.
ಮನಸ್ಸನ್ನು ಶಿಸ್ತು ಬದ್ಧ,ಶಕ್ತಿಯುತವಾಗಿಸುವುದರಲ್ಲಿ ಜ್ಞಾನದ ಮೌಲ್ಯವಿದೆ,ನಿಗ್ರಹ ಶಕ್ತಿ ಬೆಳೆಸಿಕೊಳ್ಳಬೇಕು.
ಎಲ್ಲಾ ಶಕ್ತಿಯು ನಿನ್ನಲ್ಲೇ ಇದೆ, ನೀವು ಏನು ಬೇಕಾದರೂ ಮಾಡಬಹುದು.
ವಿಸ್ತಾರವಾಗುತ್ತಾ ಹೋಗುವುದು ಜೀವನ ಸಂಕುಚಿತವಾಗುತ್ತಾ ಸಾಗುವುದೇ ಸಾವು, ಪ್ರೀತಿಯೇ ಜೀವನ ದ್ವೇಷವೇ ಸಾವು.
ಜೀವ ನಮ್ಮ ಮಾತನ್ನು ಕೇಳುವುದಿಲ್ಲ ಯಾವಾಗ ಬೇಕಾದರೂ ಹೋಗಬಹುದು ಆದರೆ ಜೀವನ ನಮ್ಮ ಮಾತನ್ನು ಕೇಳುವ ಕಾರಣ ಸರಿಯಾದ ರೀತಿಯಲ್ಲಿ ಅದನ್ನು ರೂಪಿಸಿಕೊಳ್ಳಬೇಕು.
ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ ಒಂದು ಶಕ್ತಿ, ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವವನೇ ಗುರು.
ಶಿಕ್ಷಣ ಎಂಬುದು ಮನುಷ್ಯನೊಳಗೆ ಹುದುಗಿರುವ ಪರಿಪೂರ್ಣತೆಯನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ.
ಯಾವಾಗಲೂ ನಾವು ಮಾತನಾಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು, ನಮ್ಮ ಆಲೋಚನೆಗಳು ಯಾವಾಗಲೂ ಜೀವಂತವಾಗಿರುವಂತೆ ಮತ್ತು ಪದಗಳು ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಸಂಚರಿಸುವ ಕಾರಣ ಜಾಗೃತರಾಗಿರಬೇಕು.
ಭಾರತದ ಶ್ರೇಷ್ಠ ಆಧ್ಯಾತ್ಮಿಕ ಗುರು ಮತ್ತು ಚಿಂತಕ ದೇಶ ಕಟ್ಟಲು ಯುವಜನತೆಗೆ ನೀಡಿದ ಮಾರ್ಗದರ್ಶನ ಇಂದಿಗೂ ಪ್ರಸ್ತುತವಾಗಿವೆ.
ಸ್ವಾಮಿ ವಿವೇಕಾನಂದರ ಸಂದೇಶಗಳು ಏಕತೆ, ಸ್ವಯಂ ಸಬಲೀಕರಣ ಮತ್ತು ಮಾನವೀಯತೆಗೆ ಸ್ಪಂದಿಸಿದ ಸೇವೆಯ ಸಂದೇಶ ಸಾರಿದರು ಸಾರ್ವಕಾಲಿಕವಾದವು.
ಕನ್ಯಾಕುಮಾರಿ ನೋಡಬೇಕೆಂಬ ಕನಸು ನನಸಾದ ದಿನ ಅದು ಕೂಡಾ ರೋಚಕವೇ ಸಮುದ್ರದ ಮಧ್ಯೆ ಹೋಗಲು ಹಡಗು ನಿಲ್ದಾಣಕ್ಕೆ ಹೋಗಿ ನೋಡಿದರೆ ಜನರಸಾಲು ಹನುಮಂತನ ಬಾಲದಂತೆ ಕಾಣದೇ ಉದ್ದವಾಗಿದೇ ಜನವೋ ಜನ ಸರದಿಯಲ್ಲಿ ನಿಂತರೆ ದಿನವೆಲ್ಲಾ ಸರಿದರೂ ಆಗದು ಎಂದು ಅರಿವಾಗಿ ಇನ್ನೋಮ್ಮೆ ಬಂದಾಗ ಹೋಗೋಣ ಎಂದುಕೊಂಡು ಹಿಂತಿರುಗುವ ಸಮಯ ದೈವಾನೂಕೃಪೆಯಂತೆ ಒಬ್ಬ ಪೋಲೀಸ್ ಅಧಿಕಾರಿಗಳು ಸಾಲಿನಲ್ಲಿ ನಿಲ್ಲಿ ಎಂದು ಸಾಲಿನ ಮುಂದಕ್ಕೆ ಕರೆಯಲು ನಾನು,ನನ್ನ ಪತಿ ಜೈರೂ,ಮಗಳು ಜೀವಿಕಾ ತೂರಿಕೊಂಡೆವು.ಅಂತೂ ಜೀವರಕ್ಷಕ ಸಾಧನಗಳ ಧರಿಸಿ ಹಡಗಿನಲ್ಲಿ ಪಯಣಿಸಿ ವಿವೇಕಾನಂದರು ತಪೋನಿರತರಾಗಿ ಕುಳಿತ ಬಂಡೆಯ ಮೇಲೆ ಅಡಿಯಿಟ್ಟು ನಡೆದಾಗ ಕನಸೇ ನನಸೇ ಎಂಬ ಭಾವ,ತಲೆಬಾಗಿ ಕೈಮುಗಿದು ಆ ದಿವ್ಯ ಮೂರುತಿಯ ಮುಂದೆ ಧ್ಯಾನಸ್ಥಳಾಗಿ ಮೌನದ ಸಾಮ್ರಾಜ್ಯವಾಳುವೆಡೆ ಮೌನಿಯಾಗಿ ಕಂಗಳ ತುಂಬಿಕೊಂಡೆ ಭವ್ಯ ಮೂರುತಿಯ ಸೊಬಗು ಸವಿದು ,ಸುತ್ತಲ ಜಗವ ಮನದಣಿಯ ನೋಡಿ ತಣಿದೆ.ಅಲ್ಲೇ ಪುಸ್ತಕಗಳೆಡೆ ಕಣ್ಣಾಡಿಸಿ ಕೆಲವೊಂದು ಖರೀದಿಸಿ ಸಮಯದ ಅಭಾವವರಿತು ಹೊರಡುವ ಮನವಿರದಿದ್ದರು ಹೊರಟೆವು.ಸುಯೊ೯ದಯ ವೀಕ್ಷಿಸಿ ಕಣ್ಣ್ ತುಂಬಿಕೊಂಡು,ಕಡಲ ಕಿನಾರೆಯಲ್ಲಿ ಪಟವೊಂದನ್ನು ನೆನಪಿಗೆಂದು ಕ್ಲಿಕ್ಕಿಸಿ ಕನ್ಯಾಕುಮಾರಿಯ ನೋಡಬೇಕೆಂಬ ಆಸೆ ಅಂತೂ ನೆರವೇರಿಸಿಕೊಂಡ ಸಾರ್ಥಕತೆಯೆಲ್ಲಾ ನಿಮ್ಮೋಂದಿಗೆ ಹಂಚಿಕೊಂಡೆ.
———————————
ಶಾರದಜೈರಾಂ.ಬಿ ಚಿತ್ರದುರ್ಗ
Wow very beautiful and meaningful
Suuuuper
Super, you are so talented and luckiest one.