ಕಾವ್ಯ ಪ್ರಸಾದ್‌ ಅವರ ಕವಿತೆ-ಕಾಡಿಗೆಯ ಕಣ್ಣು

 ಒಲವಿನ ಪ್ರೀತಿಯ ಗೆಳತಿ ನನ್ನ ಜೊತೆಗಿರಲು
ಈ ನನ್ನ ಬದುಕಿಗೆ  ಬೇರೆ ಇನ್ನೇನು ಬೇಕು!
ಆ ನಿನ್ನ ಪ್ರೀತಿಯು ಒಂದಿದ್ದರೆ ಸಾಕು
ಬದುಕೆಲ್ಲ ಸಿಹಿ ಸ್ವಪ್ನದಲಿ ನಾ ತೇಲುತ್ತಿರಲು!!

ಭಾನಂಗಳದ ಮಧು ಚಂದ್ರಮ ಚಂದ್ರನಂತೆ
ಧರೆಗಿಳಿದ ಶಶಿ ಕಿರಣ ಸೂರ್ಯ ಕಾಂತಿಯಂತೆ!
ಸುಗಂಧ ಬೀರುವ ಮಲ್ಲಿಗೆ ಪರಿಮಳದ ಹೂವಿನಂತೆ
ಆಕಳುವಿನ ಬಿಳಿ ತಿಳಿ ಹಾಲಿನ ನೊರೆಯಂತೆ!!

ಸೋಕಿದರೆ ಸಾಕು ಕರಗುವಂತ ಚಂದದ ಮೈ ಮಾಟವಿದೆ
ಕಾಡಿಗೆಯ ಕಣ್ಣುಗಳಲ್ಲೇ ನನ್ನ ತಿರುಗಿಸುವ ಶಕ್ತಿಯಿದೆ!
ನಿನ್ನ ಆ ನಗುವು ಏಳು ಲೋಕವನ್ನೇ ತೋರಿಸುತ್ತದೆ
ಎತ್ತ ಹೋಗಲಿ ಮತ್ತೇ ನಿನ್ನಲ್ಲಿಗೆ ಬಂದು ನಿಲ್ಲಿಸುವುದೆ!!

ಮರೆಯಲಾರೆ ಆ ರೂಪ ಅಂದ ಮುದ್ದಾದ ಮುಖವನ್ನು
ಪಾರ್ವತಿಯ ಪ್ರತಿರೂಪ ಸೌಂದರ್ಯವತಿ ನೀನಿನ್ನು!
ಮುಗ್ಧತೆಯ ಮುದ್ದು ದೇವತೆ ವರ್ಣಿಸಲಾರೆ ನಾನಿನ್ನು
ನೀನೇನು ಹೇಳಲಿಲ್ಲ ನಿನ್ನ ಬಿಟ್ಟು ಉಳಿಯಲಾರೆ ಇನ್ನು!!


Leave a Reply

Back To Top