ವ್ಯಾಸ ಜೋಷಿಯವರ ಕವಿತೆ-ವ್ಯತ್ಯಾಸ

ಶೀತಲ ಛಳಿಯಲ್ಲೂ
ಮೈಕೊಡವಿ ಅರಳಿ
ಎಲೆಯ ವಿಸ್ತರಿಸಿ
ಮೈ ಚೆಲ್ಲಿದ ಬಳ್ಳಿಗೆ
ಕೈ ತಾಕಿದರೆ ಸಾಕು
ಮುದುಡಿ
ಮೈ ಮುಚ್ಚಿಕೊಂಡಿತು
“ಮುಟ್ಟಿದರೆ ಮುನಿ”.
ಆದರೆ……..
ಈ ಥಂಡಿಗೆ ಹೆದರಿ
ಬೆಚ್ಚಗಿರಲು ಬಯಸಿ
ಮುದುಡಿದ ತರುಣಿಗೆ
ಕೈ ತಾಕಿದರೆ ಸಾಕು
ಮನಸಾರೆ ಮೈಕೊಡವಿ
ಅರಳಿತು ಹೃದಯ.

———————————————

Leave a Reply

Back To Top