ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ಕೈಯೊಡ್ಡಿ ಬೇಡಿದರೂ ಚಿಟಿಕೆ ಪ್ರೀತಿ
ದಕ್ಕದಿರಲಿ ಈ ಲೋಕದಲ್ಲಿ
ನೀ ಅತ್ತರೂ ಕಣ್ಣೊರೆಸಲು ಯಾವ ಕೈಯೂ
ಬರದಿರಲಿ ಈ ಲೋಕದಲ್ಲಿ

ಹಗಲು ಇರುಳೆನ್ನದೇ ನನ್ನೊಲವ
ಧಾರೆ ಎರೆದೆ ನಿನಗೆ
ಒಲವ ತೃಷೆ ತೀರಲು ಒಂದ್ ಹನಿಯ
ಪ್ರೇಮವೂ ಸಿಗದಿರಲಿ ಈ ಲೋಕದಲ್ಲಿ

ನಾ ಗುನುಗಿದ ಯಾವ ಮಧುರ ಗೀತೆಯನೂ
ನಿನ್ನ ಕಿವಿಯು ಆಲಿಸಲಿಲ್ಲ
ನೀ ಉಸುರುವ ಪ್ರೀತಿಯ ಪದಗಳು
ಯಾರ ಮನಸಿಗೂ ತಾಕದಿರಲಿ ಈ ಲೋಕದಲ್ಲಿ

ನಿನ್ನೊಲವಿಗಾಗಿ ಹೂವ ಹಾಸಿ ಕಾಯುವಾ ದಿನಗಳುಳಿದಿಲ್ಲ ಈಗ
ನನ್ನಂತೆ ಮೋಹಿಸುವ ಯಾವ ಮನಸೂ
ನಿನ್ನೂರ ಹಾದಿಯಲಿ ಸಾಗದಿರಲಿ ಈ ಲೋಕದಲ್ಲಿ

ವಾಣಿಯ ಭಾವನೆಗಳು ಬಸಿದು ಬಸಿದು
ಬರಿದಾದವು ನೀ ನೋಡಲೇ ಇಲ್ಲ
ನಿನ್ನೊಲವಿನ ಭುವಿಯಲಿ ಅರಳಿದ
ಹೂವು ಯಾರನೂ ಸೆಳೆಯದಿರಲಿ ಈ ಲೋಕದಲ್ಲಿ

———————————-

About The Author

Leave a Reply

You cannot copy content of this page

Scroll to Top