ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹದಿನಾರರ ಹುಚ್ಚು ಕುದುರೆ
ಕಾಮ-ಪ್ರೇಮದ ಬೇಟೆಗೆ
ಹೊರಟು ನಿಂತಿದೆ |ಮನದ
ಬಾಗಿಲಲಿ||

ತಾರುಣ್ಯವು ಮೈನೆರೆದಾಗ
ಲಾವಣ್ಯವು ಮೈ-ತುಂಬಿದೆ
ಅಂಗಾಂಗವು ಬಿಗಿಯಾಗಿವೆ
ವಿರಹದ ಬೇಗೆಯಲಿ||

ನವೀರಾದ ಬಯಕೆ
ಒಂದೊಂದೆ ಮೇಲೆದ್ದು
ಒದ್ದಾಡುತ್ತಿವೆ ನರನಾಡಿಯಲ್ಲಿ
ಭೋರ್ಗರೆದು ಧುಮ್ಮಿಕ್ಕುವ
ಅಲೆಗಳಂತೆ||

ಆಕರ್ಷಣೆಯ….
ಮೋಹ |ಬಿಗಿದಪ್ಪಿದೆ
ಮೈಗಂಟಿದ ತೊಗಲಿನಂತೆ
ಕಾಮನ ರೂಪವೇ…
ದೃಷ್ಟಿ ನೆಟ್ಟ ಕಡೆಯಲೆಲ್ಲಾ ||

ಬಯಕೆಯ ಭಾವನೆಗಳು
ನೂರ್ಮಡಿಸಿವೆ ಕೈಗೆಟುಕದೆ
ಹರೆಯದ ಕುದುರೆಯನ್ನತ್ತಿ
ಹಿಡಿಯ ಹೊರಟೆ ನಾ… ಹುಂಬನಂತೆ||


About The Author

Leave a Reply

You cannot copy content of this page

Scroll to Top