ಪೌರಾಣಿಕ ರಂಗಭೂಮಿಯ ಯುವ ಗಾಯಕ ನಟ ಸುನೀಲ್ ಕುಮಾರ್ ಎ.ಎಂ. ವ್ಯಕ್ತಿ ಪರಿಚಯ-ಗೊರೂರು ಅನಂತರಾಜು

ಹಾಸನದ ಪೌರಾಣಿಕ ರಂಗಭೂಮಿಯಲ್ಲಿ ತನ್ನ ಹಾಡು ಅಭಿನಯದಿಂದ ಪ್ರೇಕ್ಷಕರಿಂದ ಚಪ್ಪಾಳೆ ಪಡೆದು ಮೆಚ್ಚುಗೆಗೆ ಪಾತ್ರರಾದ ಯುವ ಪ್ರತಿಭೆ ಹಾಸನದ ಆಡುವಳ್ಳಿ ಅಶೋಕ ಬಡಾವಣೆಯ ಸುನೀಲ್ ಕುಮಾರ್ ಎ. ಎಂ. ಇವರ ತಂದೆ ಮಂಜುನಾಥ್ ಜೆ ನಗರಸಭಾ ಸದಸ್ಯರು. ತಾಯಿ ರೇಣುಕಾ. ತಾ 31-5-1993ರಂದು ಹುಟ್ಟಿದ ಇವರು
ಈವರೆಗೆ ನಟಿಸಿರುವಪೌರಾಣಿಕ ನಾಟಕಗಳು 73. ಅವು ಕುರುಕ್ಷೇತ್ರ, ದೇವಿ ಮಹಾತ್ಮೆ, ಶನಿ ಪ್ರಭಾವ, ರಾಮಾಯಣ, ದಕ್ಷಯಜ್ಞ, ಆಗಿವೆ. ಪ್ರಾರಂಭದಲ್ಲೇ ಇವರ ಹಾಡುಗಾರಿಕೆ ನನಗೆ ಮೆಚ್ಚುಗೆ ಆಗಿತ್ತು. ನನ್ನ (ಗೊರೂರು ಅನಂತರಾಜು)
ಸಾಮಾಜಿಕ ನಾಟಕನಾರಿ ಹೆಜ್ಜೆ ನರಿ ಕಣ್ಣು ನಾಟಕದಲ್ಲಿ ಅಭಿನಯಿಸಿದ್ದು ಉಂಟು. ಬಿಂಬ ಇವರ ಅಭಿನಯದ
ಐತಿಹಾಸಿಕ ನಾಟಕ. ಅಲುಮೇಲಮ್ಮನ ಶಾಪ ಮತ್ತೊಂದು. ಡಾ.ಚಂದ್ರಶೇಖರ ಕಂಬಾರರಜೋಕುಮಾರ ಸ್ವಾಮಿ ನಾಟಕದಲ್ಲಿನಟಿಸಿದ್ದರೂಪೌರಾಣಿಕ ಪಾತ್ರಗಳು ಇವರಿಗೆ ಹೆಸರು ತಂದುಕೊಟ್ಟಿವೆ. ಅರ್ಜುನ, ಕೃಷ್ಣ, ವಿಧುರ, ಸಾತ್ಯಕಿ, ಶಿಖಂಡಿ, ನಾರದ, ದ್ರೋಣ, ಭೀಷ್ಮ, ಇಂದ್ರಜಿತ್, ಬ್ರಹ್ಮ, ಈಶ್ವರ, ವಿಷ್ಣು, ಸೂತ್ರದಾರಿ ಹೀಗೆ ಹತ್ತಾರು ಪಾತ್ರಗಳಲ್ಲಿ ತಮ್ಮ ಅಭಿನಯ ತೋರಿದ್ದಾರೆ. ವಿಶೇಷವಾಗಿ ಹಾಡುಗಾರಿಕೆಯಿಂದ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಆ ಶಿವ ಇವರಿಗೆ ಉತ್ತಮ ಕಂಠಸಿರಿ ನೀಡಿರುವುದು ವರದಾನವಾಗಿದೆ. ಇವರ ಕಲಾ ಪ್ರತಿಭೆಗೆ ಪ್ರಶಸ್ತಿಗಳು ಹರಸಿ ಬಂದಿವೆ.
ಹಾಸನದಲ್ಲಿ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕ್ಷೇತ್ರಕ್ಕೆ ಅಂಬೇಡ್ಕರ್ ಪ್ರಶಸ್ತಿ,2017 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪತ್ರಕರ್ತರ 2ನೇ ಸಮ್ಮೇಳನದಲ್ಲಿ, ಸಂಗೀತ ರಂಗಭೂಮಿ ಕ್ಷೇತ್ರಕ್ಕೆ ರಾಜ್ಯ ಪ್ರಶಸ್ತಿದೆಹಲಿಯಲ್ಲಿ ದಲಿತ ಸಾಹಿತ್ಯ ಅಕಾಡೆಮಿಯಿಂದ ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರ ಪ್ರಶಸ್ತಿಬಂದಿದೆ. ರಂಗಭೂಮಿ ಸಾಧನೆಯಿಂದ ಕಿರುತೆರೆಯಲ್ಲೂ ತಮ್ಮ ಪ್ರತಿಭೆ ತೋರಿ2013ರಲ್ಲಿ ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮ ಅಕ್ಷರ ಮಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಂದನ ವಾಹಿನಿಯ ಗಾನ ಚಂದನ ಕಾರ್ಯಕ್ರಮದಲ್ಲಿ ಚಂದವಾಗಿ ಹಾಡಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್ ಗಾಯಕಿ ಬಿ, ಆರ್, ಛಾಯರಿಂದ ಪ್ರಶಂಸೆ ಪಡೆದಿದ್ದಾರೆ. ಸಂಗೀತ ತಂಡವನ್ನು ಕಟ್ಟಿಕೊಂಡು ಸುಮಾರು 300ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮ ನೀಡಿದ್ದಾರೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ವಿಶ್ವ ವಿಖ್ಯಾತ ಮಹಾಗೊಮ್ಮಟೇಶ್ವರ ಮಸ್ತಕಾಭಿಷೇಕ ಸಾಂಸ್ಕೃತಿಕ ವೇದಿಕೆಯಲ್ಲಿ ರಾಜ್ಯದ ಖ್ಯಾತ ಗಾಯಕರೊಂದಿಗೆ ಹಾಡಿದ್ದಾರೆ. ಖ್ಯಾತ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಒಂದು ವೇದಿಕೆಯಲ್ಲಿ ಮೆಚ್ಚಿ ಅಪ್ಪಿಕೊಂಡಿದ್ದು ಮರೆಯಲಾಗುವುದಿಲ್ಲ ಎನ್ನುತ್ತಾರೆ. ಸದ್ಯ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


Leave a Reply

Back To Top