ಕಾವ್ಯ ಸಂಗಾತಿ
ಸವಿತಾ ಇನಾಮದಾರ್
ರಾಧೇಶ್ಯಾಮ.
ನಿನ್ನ ಕೊಳಲಿನ ಮಾಧುರ್ಯಕೆ ಮನಸೋತು
ಓಡಿ ನಾ ಬಂದರೆ
ಎಲ್ಲಿ ಮಾಯವಾಗಿ ಹೋದೆ ಹೇಳು ಎನ್ನ ದೊರೆ ?
ತಾಳೆನು ಈ ಮನದ ತಳಮಳ,
ನೀನಿಲ್ಲದೇ ಬರಿದಾಗಿದೆ ಈ ಸುಂದರ ಗೋಕುಲ,
ನನ್ನ ವೇದನೆ ನಿನಗೆ ಮಾತ್ರ ಅರ್ಥವಾಗುವುದು ನಲ್ಲಾ
ಬೇಗ ಬಾ ನನ್ನ ಮನಗೆದ್ದ ಗೊಲ್ಲಾ….
‘ರಾಧೇಶ್ಯಾಮ’ ನೆಂಬ ಬಿರುದುನ್ನು ಹೊತ್ತಿರುವೆ
ನಿನ್ನುಸಿರಲ್ಲಿ ಸದಾ ಉಸಿರಾಗಲು ನಾ ಬಯಸುವೆ.
ನೀ ಬಳಿ ಬಂದು ಕುಳಿತಂತೆ
ಕನಸು ಕಾಣುತ್ತಿರುವೆ
ಒಮ್ಮೆ ಚಿವುಟಿ ಎಬ್ಬಿಸಲಾರೆಯಾ ಕೃಷ್ಣ
ನಿನ್ನ ಕಣ್ತುಂಬ ನೋಡುವೆ..
ಸವಿತಾ ಇನಾಮದಾರ್
ದೃಶ್ಯ ಕಾವ್ಯ
– ಬದರಿನಾಥ ಪಳವಳ್ಳಿ