ಅನುವಾದ
ಖಲೀಲ್ ಗಿಬ್ರಾನ್ ಕವಿತೆ “ಫಿಯರ್”
ಭಯ
ಕವಿತೆಯ ಕನ್ನಡಾನುವಾದ
ಪಿ.ವೆಂಕಟಾಚಲಯ್ಯ
ಜನಜನಿತ ನಲ್ನುಡಿಯು ಒಂದು,
ತಿಳಿಹೇಳುವುದ ಕೇಳು , ಇನಿತು.
ಸಮುದ್ರವನು ಸೇರುವ ಮೊದಲು,
ಭಯದಿಂದ ನಡಗುವುದು ನದಿ
ಯು.
ಹಿಂತಿರುಗಿ ನೋಡಿತಾ ನದಿಯು,
ಹರಿದು ಬಂದ ಹಾದಿಯ ನೆನೆದು,
ಗಿರಿಯ ನೆತ್ತಿಯಿಂದಲಿ ಇಳಿದು ,
ಅಂಕು ಡೊಂಕು ಹಾದಿಯ ತುಳಿದು,
ಕಾಡು,ಹಾಡಿಯ, ಸುತ್ತ ಬಳಸಿ,
ಗೊತ್ತು ಗುರಿಯೋ! ಎನಿತು ಇರದು.
ಮಹಾಂಬುಧಿಯ ಬುಡದಲಿ ನದಿ ಯು,
ಅದೆ ಪಯಣದ ಅಂತಿಮ ತಾವು.
ಹಿನ್ನಡಿ ಇಡಲು ಸಾಧ್ಯವೆಂತು?
ಮುನ್ನಡಿ ಇಟ್ಟರೆ ತಾನ್ ಎಂತು?
ದೈರ್ಯದಿಂದ ನುಗ್ಗಿತು ನದಿಯು.
ಶರಧಿಯೊಳು ಶರಧಿಯೆ ಆಯಿತು.
ಪಿ.ವೆಂಕಟಾಚಲಯ್ಯ.