ಎನ್.ಜಯಚಂದ್ರನ್ ಅವರ ಕವಿತೆ “ನವ ವರುಷದ ಆಶಯ”

ಸುಂದರ ಕ್ಷಣಗಳ ಕನಸುಗಳ ಹೊತ್ತು,
ಹೊಸ ಬಗೆಯ ಹೊಸ ನೋಟ
ಹೊಸ ನಾವಿನ್ಯತೆಯ ಕಾಣುತಿಹುದು ,
ವಿಶ್ವದೆಲ್ಲೆಡೆ ಮೂಡಿಹುದು ಹೊಸದೊಂದು ಸಂಚಲನ,

ಹಳೇ ನೋವುಗಳ ನೆನಪಿನಲಿ
ಮುಳುಗುತ್ತಿದೆ,
ಹೊಸ ಭಾವ ತುಂಬಿದ ಹೊಸ ಪರ್ವ –
ಹೊಸ ಚೈತನ್ಯವಿದು,

ಪ್ರೀತಿ ವಿಶ್ವಾಸದ ಸಹಬಾಳ್ವೆಯ
ಸುಂದರ ಕ್ಷಣಗಳ ಕನಸುಗಳ
ಚಿಗುರೊಡೆದು ನಳನಳಿಸುವ
ಮಾನವೀಯತೆ ಎಲ್ಲಲ್ಲೂ ಅರಳುತಿರಲಿ,

ಅನಂತ ಆಶಾಕಿರಣಗಳ
ಹೊಸ ಬಗೆಯ ನೋಟ ಮೂಡಿಹುದು
ಸಮತೆಯ ಶಾಂತಿ ಮಂತ್ರ
ನಮ್ಮೆದೆಯಲಿ ಮೊಳಗಲಿ


One thought on “ಎನ್.ಜಯಚಂದ್ರನ್ ಅವರ ಕವಿತೆ “ನವ ವರುಷದ ಆಶಯ”

Leave a Reply

Back To Top